ಬೆಂಗಳೂರು: ಕಿಚ್ಚ ಸುದೀಪ್ ನಾಯಕರಾಗಿದ್ದ ವಿಕ್ರಾಂತ್ ರೋಣ ಸಿನಿಮಾದಿಂದ ನಿರ್ಮಾಪಕ ಜ್ಯಾಕ್ ಮಂಜುಗೂ ನಷ್ಟವಾಗಿತ್ತು ಎಂದು ಆರೋಪಿಸಿದ್ದ ನಿರ್ಮಾಪಕ ರೆಹಮಾನ್ ಗೆ ಮಂಜು ಸ್ಪಷ್ಟನೆ ನೀಡಿದ್ದಾರೆ.ಕಿಚ್ಚ ಸುದೀಪ್ ಆಪ್ತರಾಗಿರುವ ಜ್ಯಾಕ್ ಮಂಜು ಇದುವರೆಗೆ ನಿರ್ಮಾಪಕರು ಮತ್ತು ಸುದೀಪ್ ನಡುವಿನ ಮನಸ್ತಾಪದ ಬಗ್ಗೆ ಮಾಧ್ಯಮಗಳ ಮುಂದೆ ಸ್ಪಷ್ಟನೆ ನೀಡುತ್ತಲೇ ಇದ್ದಾರೆ. ಇದೀಗ ವಿಕ್ರಾಂತ್ ರೋಣ ಸಿನಿಮಾದಿಂದ ನಷ್ಟವಾಗಿದೆ ಎಂಬ ಆರೋಪಗಳಿಗೂ ಸ್ಪಷ್ಟನೆ ನೀಡಿದ್ದಾರೆ.‘ನನಗೆ ವಿಕ್ರಾಂತ್ ರೋಣ ಸಿನಿಮಾದಿಂದ ಯಾವುದೇ ನಷ್ಟವಾಗಿಲ್ಲ. ತನ್ನ