ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ರಾಬರ್ಟ್ ಸಿನಿಮಾದಲ್ಲಿ ಖಡಕ್ ವಿಲನ್ ಪಾತ್ರ ಮಾಡಿರುವ ತೆಲುಗು ಸ್ಟಾರ್ ನಟ ಜಗಪತಿಬಾಬು ಕನ್ನಡದಲ್ಲೇ ಡಬ್ಬಿಂಗ್ ಮಾಡಿರುವುದು ಸುದ್ದಿಯಾಗಿದೆ. ನಿರ್ದೇಶಕ ತರುಣ್ ಸುಧೀರ್ ಈ ವಿಚಾರವನ್ನು ರಿವೀಲ್ ಮಾಡಿದ್ದರು. ಅವರು ಕನ್ನಡದಲ್ಲಿ ಇದೇ ಮೊದಲ ಬಾರಿಗೆ ಅದೂ ರಾಬರ್ಟ್ ಸಿನಿಮಾಗಾಗಿ ಡಬ್ಬಿಂಗ್ ಮಾಡಿರುವುದು ನಮಗೆ ಹೆಮ್ಮೆ ಎಂದಿದ್ದರು. ಈ ಬಗ್ಗೆ ಈಗ ಸ್ವತಃ ಜಗಪತಿಬಾಬು ಮಾತನಾಡಿದ್ದು ರಾಬರ್ಟ್ ಸಿನಿಮಾಗಾಗಿ ಮೊದಲ ಬಾರಿಗೆ ಕನ್ನಡದಲ್ಲೇ