ಬೆಂಗಳೂರು : ಸ್ಯಾಂಡಲ್ ವುಡ್ ನ ಸ್ಟಾರ್ ನಟರಾದ ದರ್ಶನ್ ಹಾಗೂ ಸುದೀಪ್ ಈಗಾಗಲೇ ಸಾಕಷ್ಟು ಅಂತರ ಏರ್ಪಟ್ಟಿದೆ. ಈ ನಡುವೆ ವೀರ ಮದಕರಿ ಚಿತ್ರದ ಕುರಿತು ತಮ್ಮ ನೆಚ್ಚಿನ ನಟರೇ ಮದಕರಿ ಪಾತ್ರ ಮಾಡಬೇಕೆಂದು ಅವರ ಅಭಿಮಾನಿಗಳ ನಡುವೆ ವಾರ್ ಶುರುವಾಗಿದೆ. ಆದರೆ ಇದೀಗ ಮಠಾಧೀಶರೊಬ್ಬರು ಮಧ್ಯಪ್ರವೇಶಿಸಿದ್ದು, ಮದಕರಿ ಚಿತ್ರದಲ್ಲಿ ನಟ ಕಿಚ್ಚ ಸುದೀಪ್ ಅವರೇ ನಟಿಸಬೇಕು ಎಂದು ಆಗ್ರಹಿಸಿದ್ದಾರೆ.