ನಟಿ ಮಾಲಾಶ್ರೀಗೆ ಕ್ಷಮೆ ಕೋರಿ ಸಾಂತ್ವನಿಸಿದ ನಟ ಜಗ್ಗೇಶ್

ಬೆಂಗಳೂರು| Krishnaveni K| Last Modified ಶನಿವಾರ, 1 ಮೇ 2021 (07:35 IST)
ಬೆಂಗಳೂರು: ಕೊರೋನಾದಿಂದಾಗಿ ಪತಿ ರಾಮು ಅವರನ್ನು ಕಳೆದುಕೊಂಡಿರುವ ನಟಿ ಮಾಲಾಶ್ರೀಗೆ ನವರಸನಾಯಕ ಜಗ್ಗೇಶ್ ಸಾಂತ್ವನ ನೀಡಿದ್ದಾರೆ.

 
ಮಾಲಾಶ್ರೀಗೆ ಟ್ವೀಟ್ ಮೂಲಕ ಸಾಂತ್ವನದ ನುಡಿಗಳನ್ನು ಜಗ್ಗೇಶ್ ಹೇಳಿದ್ದಾರೆ. ‘ನಿಮ್ಮ ಕಷ್ಟದಲ್ಲಿ ಭಾಗಿ ಆಗುವ ಯೋಗ್ಯತೆ ಇಲ್ಲದಂತೆ ಮಾಡಿದ ಈ ಸಮಯಕ್ಕೆ ತಲೆ ಬಾಗಿ ಕ್ಷಮೆ ಕೋರುವೆ. ತಮ್ಮ ನೋವಿಗೆ ಸಾಂತ್ವನ ಹೇಳುವ ಶಕ್ತಿ ಮಾತ್ರ ಉಳಿದಿದೆ. ಕನ್ನಡ ಚಿತ್ರರಂಗಕ್ಕೆ ಅನನ್ಯ ಸೇವೆ ಮಾಡಿ ಅನೇಕ ಚಿತ್ರ ಕಾರ್ಮಿಕರಿಗೆ ಅನ್ನ ನೀಡಿದ ಮಹನೀಯ ನನ್ನ ತಮ್ಮ ರಾಮು. ಅವನ ಆತ್ಮಕ್ಕೆ ಶಾಂತಿ ಕೋರುವೆ ಮನೆಯಲ್ಲಿಯೇ.
 
ರಾಮು ಮತ್ತೆ ಹುಟ್ಟಿಬರಲಿ ಎನ್ನುವುದು ನನ್ನ ಪ್ರಾರ್ಥನೆ. ದಯಮಾಡಿ ಈ ಸಂಕಷ್ಟವನ್ನು ಎದುರಿಸಿ ಮಕ್ಕಳನ್ನು ರಾಮು ಎತ್ತರಕ್ಕೆ ಬೆಳೆಸಿ. ನಿಮ್ಮ ಜೊತೆ ನಾವು ಉದ್ಯಮದ ಸ್ನೇಹಿತರು ಎಲ್ಲರೂ ಇರುತ್ತೇವೆ. ಮುಂದಿನ ಸಾಂಸಾರಿಕ ಜೀವನ ನಿಭಾಯಿಸುವ ಶಕ್ತಿ ಆ ರಾಯರು ನಿಮಗೆ ನೀಡಲಿ’ ಎಂದು ಜಗ್ಗೇಶ್ ಸಾಂತ್ವನ ಸಂದೇಶ ಬರೆದಿದ್ದಾರೆ.
ಇದರಲ್ಲಿ ಇನ್ನಷ್ಟು ಓದಿ :