ಬೆಂಗಳೂರು: ದರ್ಶನ್ ಫ್ಯಾನ್ಸ್ ವಿವಾದದ ಬಳಿಕ ಮಾನಸಿಕವಾಗಿ ನೊಂದಿರುವ ನವರಸನಾಯಕ ಜಗ್ಗೇಶ್ ಸಾರ್ವಜನಿಕ ಕಾರ್ಯಕ್ರಮಗಳಿಂದಲೇ ದೂರವಾಗುವ ನಿರ್ಧಾರಕ್ಕೆ ಬಂದಿದ್ದಾರೆ. ತಮ್ಮ ಬಗ್ಗೆ ಪತ್ರಿಕೆಯೊಂದು ಅವಹೇಳನಕಾರಿಯಾಗಿ ಬರೆದ ಮೇಲೆ ಲೈವ್ ಬಂದು ಆಕ್ರೋಶ ವ್ಯಕ್ತಪಡಿಸಿದ್ದ ಜಗ್ಗೇಶ್, ಬಳಿಕ ಟ್ವೀಟ್ ಮಾಡಿ ಇನ್ನು ಮುಂದೆ ಉದ್ಯಮದ ಯಾರ ಹುಟ್ಟುಹಬ್ಬ, ಸಿನಿಮಾ, ಸ್ನೇಹ ಕಾರ್ಯಕ್ರಮ, ಹುಟ್ಟುಹಬ್ಬ, ಭೇಟಿ, ಹರಟೆ ಕಾರ್ಯಕ್ರಮ ನನ್ನಿಂದ ಇರಲ್ಲ. ಮುಂದೆ ನನ್ನ ಸಿನಿಮಾ, ಜೀ ಟಿವಿ ಶೋಗಾಗಿ ಮೀಸಲು ಬದುಕು.