ಬೆಂಗಳೂರು: ಕನ್ನಡದಲ್ಲಿ ಡಬ್ಬಿಂಗ್ ಹಾವಳಿ ಬಗ್ಗೆ ನವರಸನಾಯಕ ಜಗ್ಗೇಶ್ ಬೇಸರ ವ್ಯಕ್ತಪಡಿಸಿದ್ದಾರೆ. ಪ್ಯಾನ್ ಇಂಡಿಯಾ ಸಿನಿಮಾ ಬಗ್ಗೆ ಮಾತನಾಡಿದ್ದಕ್ಕೆ ಅವರು ಕೆಲವು ಸ್ಟಾರ್ ನಟರ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದರು. ಇದೀಗ ಡಬ್ಬಿಂಗ್ ಕಬಂಧ ಬಾಹುವಿನ ಬಗ್ಗೆ ಮಾತನಾಡಿರುವ ಜಗ್ಗೇಶ್ ‘ಕೆಲವು ವರ್ಷ ಕಳೀರಿ, ಆಮೇಲೆ ನೋಡಿ ಕನ್ನಡಿಗನ ಸ್ಥಿತಿ ಏನಾಗುತ್ತದೆ ಎಂದು. ನಿಮ್ಮ ನೆಲ,ಜಲ ವೃತ್ತಿ ಕಂಡೋರ ಪಾಲಾಗುತ್ತದೆ. ಅಂದು ಪರಿತಪಿಸಿದರೂ ನಿಮ್ಮ ಪರವಾಗಿ ಯಾರೂ ನಿಲ್ಲರು. ನನ್ನ ನುಡಿಯನ್ನು