ಬೆಂಗಳೂರು: ಪ್ಯಾನ್ ಇಂಡಿಯಾ ಸಿನಿಮಾ ಮಾಡುವವರ ವಿರುದ್ಧ ಹೇಳಿಕೆ ನೀಡಿ ರಾಕಿಂಗ್ ಸ್ಟಾರ್ ಯಶ್ ಸೇರಿದಂತೆ ಕೆಲವು ಸ್ಟಾರ್ ನಟರ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದ ನವರಸನಾಯಕ ಜಗ್ಗೇಶ್ ಈಗ ಮತ್ತೊಂದು ಹೇಳಿಕೆ ನೀಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ತಮ್ಮ ಬಗ್ಗೆ ಕೇಳಿಬರುತ್ತಿರುವ ಟೀಕೆಗಳ ಬಗ್ಗೆ ಒಂದೇ ಮಾತಿನಲ್ಲಿ ಪ್ರತಿಕ್ರಿಯೆ ನೀಡಿ ಮುಗಿಸುವೆ ಎಂದಿರುವ ಜಗ್ಗೇಶ್ ‘ಇಂದಿನ ಕೆಲ ಸ್ವಪ್ರತಿಷ್ಠೆ ನಟರಿಗೆ ನಮ್ಮಂಥ ಸೀನಿಯಾರಿಟಿ ನಟರು ತೊಡಕಾಗಿದ್ದೇವೆ. ನಾವು ಹೋದರೆ ಅಥವಾ ಸತ್ತರೆ