ಬೆಂಗಳೂರು: ನವರಸನಾಯಕ ಜಗ್ಗೇಶ್ ಈಗ ಸಂತೋಷ್ ಆನಂದ್ ರಾಮ್ ನಿರ್ದೇಶನದ ‘ರಾಘವೇಂದ್ರ ಸ್ಟೋರ್ಸ್ ಸಿನಿಮಾ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ.ಮೊದಲ ಹಂತದ ಚಿತ್ರೀಕರಣ ಪೂರೈಸಿರುವ ಚಿತ್ರತಂಡ ಈಗ ಮಲೆನಾಡಿನ ಸುಂದರ ತಾಣಗಳಲ್ಲಿ ಚಿತ್ರೀಕರಣ ನಡೆಸುತ್ತಿದೆ. ಇದೀಗ ತೀರ್ಥಹಳ್ಳಿಯ ಹಳೆಯ ಮನೆಯೊಂದರಲ್ಲಿ ಚಿತ್ರೀಕರಣ ನಡೆಯುತ್ತಿದೆ.ಈ ಮನೆಯಲ್ಲಿಯೇ ಅಂದು ಜಗ್ಗೇಶ್ ಗೆ ಹೊಸ ಬ್ರೇಕ್ ಕೊಟ್ಟ ‘ಮಠ’ ಸಿನಿಮಾ ಚಿತ್ರೀಕರಣವಾಗಿತ್ತಂತೆ. ಇದಾಗಿ 16 ವರ್ಷಗಳ ಬಳಿಕ ಮತ್ತೆ ಅದೇ ಮನೆಯಲ್ಲಿ ಶೂಟಿಂಗ್ ನಡೆಯುತ್ತಿದೆ ಎಂದು ಜಗ್ಗೇಶ್