ಬೆಂಗಳೂರು: ನವರಸನಾಯಕ ಜಗ್ಗೇಶ್ ಹಲವು ಸಮಾಜ ಮುಖಿ ಕೆಲಸಗಳನ್ನು ಮಾಡುತ್ತಿರುವುದರ ಬಗ್ಗೆ ಆಗಾಗ ಸಾಮಾಜಿಕ ಜಾಲತಾಣಗಳ ಮೂಲಕ ಬಹಿರಂಗವಾಗುತ್ತದೆ.ಇದೀಗ ಜಗ್ಗೇಶ್ ತಮಗಿರುವ ಪಕ್ಷಿ ಪ್ರೇಮದ ಬಗ್ಗೆ ಬರೆದುಕೊಂಡಿದ್ದಾರೆ. ಜಗ್ಗೇಶ್ ಬಳಿ 7 ಜಾತಿಯ ಸುಮಾರು 2000 ಪಕ್ಷಿಗಳಿವೆಯಂತೆ! ಮೇವು ಹುಡುಕಿಕೊಂಡು ಬಂದ ಈ ಪಕ್ಷಿಗಳಿಗೆ ಜಗ್ಗೇಶ್ ಪ್ರತಿ ನಿತ್ಯ 8 ಕೆಜಿ ಧಾನ್ಯ ಆಹಾರವಾಗಿ ಕೊಡುತ್ತಿದ್ದಾರಂತೆ. ಅದನ್ನು ಕೊಡುವುದಕ್ಕೆಂದೇ ವ್ಯಕ್ತಿಯೊಬ್ಬನನ್ನು ನೇಮಿಸಿದ್ದಾರಂತೆ.ಮೇವು, ಮರ ಎಲ್ಲಿ ಸಿಗುತ್ತದೋ ಅಲ್ಲಿಗೆ ಹಕ್ಕಿಗಳು ಹುಡುಕಿಕೊಂಡು