ಬೆಂಗಳೂರು: ಬೆಳ್ಳಂದೂರು ಕೆರೆಯ ಬಗ್ಗೆ ಕೇಳಿದರೇ ಜನ ಬೆಚ್ಚಿ ಬೀಳುವಂತಾಗಿದೆ. ಅಂದು ಕೆರೆಯನ್ನು ನೋಡಿದವರು ಇಂದು ಕೆರೆಯ ಬಗ್ಗೆ ಹೇಳಿಕೊಂಡು ಮರುಗುವಂತಾಗಿದೆ. ಅದೇ ರೀತಿ ನವರಸನಾಯಕ ಜಗ್ಗೇಶ್ ಕೂಡಾ ಹಳೆಯ ದಿನಗಳನ್ನು ನೆನೆಸಿಕೊಂಡಿದ್ದಾರೆ. ಅಭಿಮಾನಿಗಳೊಬ್ಬರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಜಗ್ಗೇಶ್, ಹಿಂದೆ ಈ ಕೆರೆಯಲ್ಲಿ ಶೂಟಿಂಗ್ ಮಾಡಿದ್ದೆವು. ಮಾಡಿದ ನಂತರ ಇಲ್ಲಿಯೇ ಕೆರೆಯಲ್ಲಿ ಈಜಿ ಸ್ನಾನ ಮಾಡಿದ್ದೆ ಎಂದು ಜಗ್ಗೇಶ್ ಸ್ಮರಿಸಿಕೊಂಡಿದ್ದಾರೆ.ವಿಪರ್ಯಾಸವೆಂದರೆ ಈಗ ಇದೇ ಕೆರೆ ಕಲುಷಿತಗಳ ತಾಣವಾಗಿದೆ.