ಬೆಂಗಳೂರು: ನವರಸನಾಯಕ ಜಗ್ಗೇಶ್ ಈ ಬಾರಿ ಉಪಚುನಾವಣೆಯಲ್ಲಿ ಸ್ಪರ್ಧಿಸಲಿ ಎಂಬ ಒತ್ತಾಯ ಕೇಳಿಬರುತ್ತಿದ್ದು, ನವರಸನಾಯಕನೂ ಪರೋಕ್ಷವಾಗಿ ಅವಕಾಶ ಕೊಟ್ಟರೆ ಸ್ಪರ್ಧಿಸುವ ಬಯಕೆ ವ್ಯಕ್ತಪಡಿಸಿದ್ದಾರೆ.ಕಳೆದ ವಿಧಾನಸಭೆ ಚುನಾವಣೆಯಲ್ಲಿ ಯಶವಂತಪುರ ಕ್ಷೇತ್ರದಿಂದ ಸ್ಪರ್ಧಿಸಿ ಸೋತಿದ್ದ ಜಗ್ಗೇಶ್ ರನ್ನು ಮತ್ತೆ ಕಣಕ್ಕಿಳಿಸಲು ಕಾರ್ಯಕರ್ತರಿಂದಲೇ ಒತ್ತಾಯ ಕೇಳಿಬಂದಿದೆ ಎನ್ನಲಾಗಿದೆ. ಕಳೆದ ಬಾರಿ ಕಡೇ ಕ್ಷಣದಲ್ಲಿ ಚುನಾವಣೆಗೆ ಸ್ಪರ್ಧಿಸಿದ್ದರೂ 60 ಸಾವಿರ ಮತ ಪಡೆಯಲು ಯಶಸ್ವಿಯಾಗಿದ್ದ ಜಗ್ಗೇಶ್ ರನ್ನು ಈ ಬಾರಿ ಪೂರ್ವ ತಯಾರಿಯೊಂದಿಗೆ ಕಣಕ್ಕಿಳಿಸಿದರೆ ಗೆಲ್ಲುತ್ತಾರೆ