ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜಕುಮಾರ್ ತಾವು ಜಗ್ಗೇಶ್ ಅಭಿಮಾನಿ ಎಂದು ಎಷ್ಟೋ ಸಾರಿ ಹೇಳಿಕೊಂಡಿದ್ದಾರೆ. ಈ ಬಗ್ಗೆ ಅಭಿಮಾನಿಯೊಬ್ಬರು ಕೇಳಿದ ಪ್ರಶ್ನೆಗೆ ಜಗ್ಗೇಶ್ ಪ್ರತಿಕ್ರಿಯೆ ನೀಡಿದ್ದಾರೆ.ಪುನೀತ್ ತಮ್ಮ ಜತೆಗಿರುವಾಗಲೆಲ್ಲಾ ಮನತುಂಬಿ ನಗುತ್ತಾ ಮಾತನಾಡುವುದು ಹೇಗೆ ಎಂದು ಅಭಿಮಾನಿಯೊಬ್ಬರು ಕೇಳಿದ ಪ್ರಶ್ನೆಗೆ ಜಗ್ಗೇಶ್ ಉತ್ತರಿಸಿದ್ದು ಹೀಗೆ:ಬಾಲ್ಯದಿಂದಲೂ ಆತನ ಕಂಡರೆ ನನಗಿಷ್ಟ. ಶಿವಣ್ಣ, ರಾಘಣ್ಣ, ಪುನೀತ್ ಅವರ ಅಪ್ಪನ ಗುಣದ ಪಡಿಯಚ್ಚು. ಸ್ವಲ್ಪವೂ ತೋರ್ಪಡಿಕೆ ಇಲ್ಲದ ಜೀವಗಳು. ಅದಕ್ಕೆ ಅಲ್ಲವೆ ಹಿರಿಯರು