ಬೆಂಗಳೂರು: ನವರಸನಾಯಕ ಜಗ್ಗೇಶ್ ಈಗಷ್ಟೇ ತೋತಾಪುರಿ ಸಿನಿಮಾ ಮುಗಿಸಿಕೊಟ್ಟಿದ್ದಾರೆ. ಇದೀಗ ರಂಗನಾಯಕ ಸಿನಿಮಾಗೆ ಸಿದ್ಧವಾಗಿದ್ದಾರೆ. ಮಠ ಸಿನಿಮಾ ಬಳಿಕ ಗುರುಪ್ರಸಾದ್ ನಿರ್ದೇಶನದಲ್ಲಿ ಜಗ್ಗೇಶ್ ಮಾಡುತ್ತಿರುವ ಸಿನಿಮಾ ‘ರಂಗನಾಯಕ’ ಈ ಸಿನಿಮಾ ಲಾಕ್ ಡೌನ್ ಗೂ ಮೊದಲೇ ಸೆಟ್ಟೇರಿತ್ತು.ಇದೀಗ ಆಗಸ್ಟ್ 12 ರಿಂದ ಚಿತ್ರೀಕರಣ ಪ್ರಾರಂಭವಾಗುತ್ತಿರುವುದಾಗಿ ಜಗ್ಗೇಶ್ ಮಾಹಿತಿ ನೀಡಿದ್ದಾರೆ. ಅದಕ್ಕೂ ಮೊದಲು ಜಗ್ಗೇಶ್ ಪತ್ನಿ ಸಮೇತರಾಗಿ ಶಿರಸಿಗೆ ಪ್ರಯಾಣ ಬೆಳೆಸಿದ್ದು, ಮಾರಿಕಾಂಬೆಯ ದರ್ಶನ ಪಡೆದು ಬರುವುದಾಗಿ ಹೇಳಿದ್ದಾರೆ.