ಬೆಂಗಳೂರು: ನವರಸನಾಯಕ ಜಗ್ಗೇಶ್ ಅಭಿನಯಿಸಿರುವ ತೋತಾಪುರಿ ಸಿನಿಮಾದ ಹಾಡಿನ ಟೀಸರ್ ಒಂದನ್ನು ಮೊನ್ನೆಯಷ್ಟೇ ಬಿಡುಗಡೆ ಮಾಡಿತ್ತು. ಆದರೆ ಹಾಡಿನ ಟೀಸರ್ ನಲ್ಲಿ ಕೇಳಿ ಬಂದ ಸಾಲುಗಳಲ್ಲಿ ಕನ್ನಡ ಪದಗಳೇ ಮಂಗಮಾಯವಾಗಿತ್ತು. ಇದರಿಂದಾಗಿ ಚಿತ್ರತಂಡ ಟೀಕೆಗೊಳಗಾಗಿತ್ತು.ಹೆಸರಿಗೆ ಕನ್ನಡ ಸಿನಿಮಾ. ಜಗ್ಗೇಶ್ ಕೂಡಾ ಕನ್ನಡ ಎಂದೇ ಮಾತನಾಡುತ್ತಿರುತ್ತಾರೆ. ಆದರೆ ಅವರ ಹಾಡಿನಲ್ಲಿ ಕನ್ನಡ ಪದಗಳಿಗಿಂತ ಹಿಂದಿ, ಉರ್ದು ಭಾಷೆಯೇ ಅತಿಯಾಗಿದೆ ಎಂದು ನೆಟ್ಟಿಗರು ಟೀಕಿಸಿದ್ದರು. ಇದಕ್ಕೀಗ ಜಗ್ಗೇಶ್ ಸ್ಪಷ್ಟನೆ ಕೊಟ್ಟಿದ್ದಾರೆ.‘ಜನವರಿ 31 ಕ್ಕೆ