ದರ್ಶನ್ ಗೂ ನನಗೂ ಯಾವ ಮನಸ್ತಾಪವೂ ಇಲ್ಲ: ಜಗ್ಗೇಶ್ ಸ್ಪಷ್ಟನೆ

ಬೆಂಗಳೂರು| Krishnaveni K| Last Modified ಗುರುವಾರ, 22 ಜುಲೈ 2021 (10:30 IST)
ಬೆಂಗಳೂರು: ನವರಸನಾಯಕ ಜಗ್ಗೇಶ್ ಇನ್ ಸ್ಟಾಗ್ರಾಂ ಪುಟದ‍ಲ್ಲಿ ಅಭಿಮಾನಿಯೊಬ್ಬರು ಜಗ್ಗೇಶ್ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ್ದಾರೆ.
 

ಜಗ್ಗೇಶ್ ವಿಡಿಯೋ ಸಂದೇಶವೊಂದರಲ್ಲಿ ತಾವು ಈ ವರ್ಷ ಒಪ್ಪಿಕೊಳ್ಳುತ್ತಿರುವ ಸಿನಿಮಾಗಳ ಬಗ್ಗೆ ಮಾಹಿತಿ ನೀಡಿದ್ದಾರೆ. ಒಟ್ಟು ನಾಲ್ಕು ಅದ್ಭುತ ಸ್ಕ್ರಿಪ್ಟ್ ಕೇಳಿದ್ದೇನೆ. ಈ ಪೈಕಿ ಎರಡು ಓಕೆ ಆಗಿದೆ. ಇನ್ನೆರಡರ ಕೆಲವು ಫೈನ್ ಟ್ಯೂನಿಂಗ್ ಕೆಲಸಗಳಿವೆ. ಎಲ್ಲರೂ ನಗ್ತಾ ಇರಿ, ಖುಷಿಯಾಗಿರಿ ಎಂದು ಜಗ್ಗೇಶ್ ವಿಡಿಯೋ ಸಂದೇಶ ನೀಡಿದ್ದರು.
 
ಈ ಪೋಸ್ಟ್ ಗೆ ಪ್ರತಿಕ್ರಿಯಿಸಿರುವ ನೆಟ್ಟಿಗರೊಬ್ಬರು ‘ಪ್ಲೀಸ್ ಸರ್, ಡಿ ಬಾಸ್ ಪರವಾಗಿ ಹೇಳಿಕೆ ನೀಡಿ. ನಿಮ್ಮ ನಡುವೆ ಏನೇ ಮನಸ್ತಾಪವಿದ್ದರೂ ಅಭಿಮಾನಿಗಳ ಸಲುವಾಗಿ ಡಿ ಬಾಸ್ ಪರವಾಗಿ ಕೈ ಜೋಡಿಸಿ’ ಎಂದು ಕೇಳಿಕೊಂಡಿದ್ದರು. ಇದಕ್ಕೆ ಉತ್ತರಿಸಿರುವ ಜಗ್ಗೇಶ‍್ ದರ್ಶನ್ ಗೂ ನನಗೂ ಯಾವುದೇ ಮನಸ್ತಾಪವಿಲ್ಲ. ಆತ ನನ್ನ ಕಲಾಬಂಧು’ ಎಂದಿದ್ದಾರೆ.
ಇದರಲ್ಲಿ ಇನ್ನಷ್ಟು ಓದಿ :