ಡಾ.ರಾಜ್ ಫೇವರಿಟ್ ಟಿವಿ ಬಗ್ಗೆ ಜಗ್ಗೇಶ್ ಬಿಚ್ಚಿಟ್ಟ ನೆನಪು

ಬೆಂಗಳೂರು| Krishnaveni K| Last Modified ಭಾನುವಾರ, 17 ಜನವರಿ 2021 (09:53 IST)
ಬೆಂಗಳೂರು: ವರನಟ ಡಾ.ರಾಜಕುಮಾರ್ ಕಟ್ಟಾ ಅಭಿಮಾನಿಯಾಗಿರುವ ನವರಸನಾಯಕ ಜಗ್ಗೇಶ್ ಅವರ ಬಗ್ಗೆ ಹಳೆಯದೊಂದು ನೆನಪು ಮೆಲುಕು ಹಾಕಿದ್ದಾರೆ.
 

ಡಾ.ರಾಜ್ ಅವರ ಫೇವರಿಟ್ ಟಿವಿಯ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿರುವ ಜಗ್ಗೇಶ್ ‘ಇದು ರಾಜಣ್ಣನ ಫೇವರಿಟ್ ಟಿವಿ. ಅವರನ್ನು ನೋಡಲು ಹೋದಾಗ ಈ ಟಿವಿಯಲ್ಲಿ ಎರಡು ಕನಸು ಚಿತ್ರದ ಎಂದೆಂದು ನಿನ್ನನು ಮರೆತು ಹಾಡನ್ನು ನೋಡುತ್ತಿದ್ದರು. ಈ ಸನ್ನಿವೇಶ ಊಟದ ಬ್ರೇಕ್ ನ ನಂತರ ತೆಗೆದಿದ್ದು ಎಂದು ಅವರು ನಿಖರವಾಗಿ ಹೇಳಿದ್ದರು. ಅಣ್ಣನ ಟಿವಿಯ ಚಿತ್ರವನ್ನು ಯಾವಾಗಲೋ ತೆಗೆದಿಟ್ಟಿದ್ದೆ. ಆ ಫೋಟೋ ನನಗೆ ಈವತ್ತು ಸಿಕ್ಕಿತು’ ಎಂದು ಬರೆದುಕೊಂಡಿದ್ದಾರೆ.
ಇದರಲ್ಲಿ ಇನ್ನಷ್ಟು ಓದಿ :