ಡಾ.ರಾಜ್ ಪಾಲಿಗೆ ಶಿವಣ್ಣ ನೋಟಿನ ಸಾಹುಕಾರನಂತೆ!

ಬೆಂಗಳೂರು| Krishnaveni K| Last Updated: ಭಾನುವಾರ, 21 ಫೆಬ್ರವರಿ 2021 (10:36 IST)
ಬೆಂಗಳೂರು: ವರನಟ ಡಾ. ರಾಜ್ ಕುಮಾರ್ ಅವರ ಪಾಲಿಗೆ ಹಿರಿಯ ಪುತ್ರ ಶಿವರಾಜ್ ಕುಮಾರ್ ಎಂದರೆ ನೋಟಿನ ಸಾಹುಕಾರನಂತೆ! ಹೀಗಂತ ನವರಸನಾಯಕ ಜಗ್ಗೇಶ್ ಹಳೆಯ ಘಟನೆಯೊಂದನ್ನು ನೆನೆಸಿಕೊಂಡಿದ್ದಾರೆ.

 
ಶಿವಣ್ಣ ಚಿತ್ರರಂಗಕ್ಕೆ ಬಂದು 35 ವರ್ಷವಾದ ಹಿನ್ನಲೆಯಲ್ಲಿ ಜಗ್ಗೇಶ್ ಹಳೆಯ ಘಟನೆಯೊಂದನ್ನು ಮೆಲುಕು ಹಾಕಿದ್ದಾರೆ. ‘ರಾಜಣ್ಣನ ನೆಚ್ಚಿನ ದೊಡ್ಡ ನೋಟಿನ ಸಾಹುಕಾರ ಅವರ ಹಿರಿಮಗ ಶಿವಣ್ಣ! ಕಾರಣ ಶಿವಣ್ಣ ಹುಟ್ಟಿದಾಗ ರಾಜಣ್ಣ ಅಂದಿನ ಸಾವಿರ ರೂಪಾಯಿ ಸಂಬಳ ಕಂಡಿದ್ದರಂತೆ. ರಾಜಣ್ಣನ ಬಾಯಿಯಿಂದ ನೇರವಾಗಿ ನಾನು ಕೇಳಿದ ಮಾತಿದು. ಇಂದು ಅವರ ಮುದ್ದಿನ ಮಗ ಬಣ್ಣದ ಲೋಕದಲ್ಲಿ 35 ವರ್ಷ ಪೂರೈಸಿದ್ದಾರೆ. ಅದು 100 ವರ್ಷವಾಗುವಂತೆ ಕನ್ನಡಿಗರು ಹರಸಲಿ ಎಂದು ಶುಭ ಹಾರೈಕೆ ಅವರ ತಮ್ಮನಾಗಿ’ ಎಂದು ಜಗ್ಗೇಶ್ ಹೇಳಿದ್ದಾರೆ.
ಇದರಲ್ಲಿ ಇನ್ನಷ್ಟು ಓದಿ :