ಬೆಂಗಳೂರು: ಇತ್ತೀಚೆಗೆ ಅವಕಾಶ ಸಿಕ್ಕಾಗಲೆಲ್ಲಾ ಬಿಜೆಪಿ ನಾಯಕರ ಮೇಲೆ ಹರಿಹಾಯುತ್ತಿರುವ ಬಹುಭಾಷಾ ತಾರೆ ಪ್ರಕಾಶ್ ರೈ ಮೇಲೆ ನಟ, ಬಿಜೆಪಿ ನಾಯಕ ಜಗ್ಗೇಶ್ ಚಾಟಿ ಬೀಸಿದ್ದಾರೆ. ಬೆಂಗಳೂರಿನಲ್ಲಿ ಬಿಜೆಪಿ ಕಾರ್ಯಕರ್ತಸಂತೋಷ್ ಕೊಲೆಯಾಗಿದೆ. ಇದರ ಬಗ್ಗೆ ಟ್ವೀಟ್ ಮಾಡಿರುವ ಜಗ್ಗೇಶ್ ಈ ಯುವಕನ ಕೊಲೆ ಬಗ್ಗೆ ಮಾತನಾಡಲು ನಿಮಗೆ ನಾಲಿಗೆ ಹೊರಳುತ್ತಿಲ್ಲವೇ ಎಂದು ಪ್ರಕಾಶ್ ರೈ ಮತ್ತು ಸಾಮಾಜಿಕ ಹೋರಾಟಗಾರ ದೊರೆಸ್ವಾಮಿ ಅವರಿಗೆ ಪ್ರಶ್ನಿಸಿದ್ದಾರೆ.ಮಿತ್ರ ಪ್ರಕಾಶ್ ರೈ, ಪಿತೃ ಸಮಾನರಾದ