ಕೆಜಿಎಫ್ ಚಿತ್ರ ತುಳಿಯಲು ಸಾಥ್ ನೀಡುವವರಿಗೆ ತಕ್ಕ ಉತ್ತರ ಕೊಟ್ಟ ನಟ ಜಗ್ಗೇಶ್

ಬೆಂಗಳೂರು, ಶುಕ್ರವಾರ, 9 ನವೆಂಬರ್ 2018 (07:03 IST)

ಬೆಂಗಳೂರು : ಬಾಲಿವುಡ್ ನ ಬಾದ್ ಶಾ ಶಾರುಖ್ ಖಾನ್ ಹಾಗೂ ಸ್ಯಾಂಡಲ್ ವುಡ್ ನಟ ರಾಕಿಂಗ್ ಸ್ಟಾರ್ ಯಶ್ ಅಭಿಮಾನಗಳ ನಡುವೆ ವಾರ್ ಶುರುವಾಗಿದೆ.


ಹೌದು. ಸ್ಯಾಂಡಲ್ ವುಡ್ ನಟ ರಾಕಿಂಗ್ ಸ್ಟಾರ್ ಯಶ್ ನಟಿಸಿದ ‘ಕೆಜಿಎಫ್’ ಹಾಗೂ ಬಾಲಿವುಡ್ ನ ಬಾದ್ ಶಾ ಶಾರುಖ್ ಖಾನ್ ಅವರ ‘ಜೀರೋ’ ಸಿನಿಮಾ ಒಂದೇ ದಿನ ರಿಲೀಸ್ ಆಗುತ್ತಿದೆ. ಈ ವಿಚಾರಕ್ಕೆ ಇದೀಗ ಸೋಶಿಯಲ್ ಮೀಡಿಯಾದಲ್ಲಿ  ಅಭಿಮಾನಿಗಳ ನಡುವೆ ಕಿತ್ತಾಟ ಶುರುವಾಗಿದೆ. ಜೀರೋ ಮುಂದೆ ಕೆಜಿಎಫ್ ತೆರೆಗೆಲೆಯಂತೆ ಹಾರಿ ಹೋಗುತ್ತೆ ಅಂತಾ ಶಾರುಖ್ ಅಭಿಮಾನಿಗಳು ಬಿಲ್ಡಪ್ ಕೊಡುತ್ತಿದ್ದರೆ, ಅಣ್ತಮ್ಮಾ ರಿಲೀಸ್​ಗೂ ಮುನ್ನವೇ ಕೆಜಿಎಫ್​ ಗೆದ್ದಾಗಿದೆ ಅಂತಾ ರಾಕಿಂಗ್ ಸ್ಟಾರ್ ಅಭಿಮಾನಿಗಳು ಕಾಲರ್ ಏರಿಸಿ ಹೇಳುತ್ತಿದ್ದಾರೆ. ಅಲ್ಲದೇ ಕನ್ನಡದ ಈ ಚಿತ್ರವನ್ನು ತುಳಿಯಲು ನಮ್ಮವರೇ ಸಾಥ್ ಕೊಡುತ್ತಿದ್ದಾರೆ ಎನ್ನುವ ಮಾತು ಕೂಡ ಕೇಳಿ ಬರುತ್ತಿದೆ.


ಈ ಬಗ್ಗೆ ಟ್ವೀಟರ್ ನಲ್ಲಿ  ಪ್ರತಿಕ್ರಿಯೆ ನೀಡಿರುವ ನಟ ಜಗ್ಗೇಶ್ ಅವರು 'ಕನ್ನಡತಿ ಕಿತ್ತೂರು ಚನ್ನಮ್ಮನ ಬೆನ್ನಿಗೆ ಚೂರಿ ಹಾಕಿದವನು ಕನ್ನಡನಾಡಿನ ಅನ್ನ ತಿಂದ ಮಲ್ಲಪ್ಪನೆ ಅಲ್ಲವೆ..!! ಎಲ್ಲ ಕಾಲದಲ್ಲೂ ಇಂಥ ಮುಖವಾಡ ತೊಟ್ಟು ಬೆನ್ನಿಗೆ ಚೂರಿ ಹಾಕುವವರು ಇದ್ದೆ ಇರುತ್ತಾರೆ..!! ಅವರ ಸಂಖ್ಯೆ ಕಮ್ಮಿ , ಶಬ್ಧಜಾಸ್ತಿ..!! ಉದಾಸೀನವೆ ಶ್ರೇಷ್ಠ..!! ಅಂಥವರು ಅಭಿಮಾನದ ಕೋಟಿಹಸ್ತಗಳ ಚಪ್ಪಾಳೆ ಸದ್ಧಿನಲ್ಲಿ ಕಳೆದುಹೋಗುತ್ತಾರೆ ಎಂದು ಹೇಳಿದ್ದಾರೆ.


ಮತ್ತೊಂದು ಟ್ವೀಟ್​ನಲ್ಲಿ 'ಕನ್ನಡದ ಬೆಳವಣಿಗೆಗೆ ಶ್ರಮಿಸುವ ಯಾರೇ ಆಗಲಿ ಅವರ ಭುಜತಟ್ಟಿ ಹುರಿದುಂಬಿಸುವವನೇ ನಿಜವಾದ ಕನ್ನಡಿಗ. ಅಸೂಯೆ ಪಡುವವನು ಸಾಧಿಸಲಾಗದ ಸಾಧಿಸಿದವರನ್ನು ಸಹಿಸದಲಾಗದ ನಿಶ್ಪ್ರಯೋಜಕ. ಹೆಮ್ಮೆ ಪಡಿ ನಮ್ಮ ಕಲಾ ಬಂಧುಗಳಿಂದ ಕನ್ನಡ ಚಿತ್ರರಂಗ ಮುಂಚೂಣಿಗೆ ನುಗ್ಗುತ್ತಿದೆ.  ಪರಭಾಷಿಕರಿಗೆ ಕನ್ನಡಚಿತ್ರರಂಗ ಕುತೂಹಲ ಮೂಡಿಸುತ್ತಿದೆ. ಹೆಮ್ಮೆಯಿಂದ ಜೈ ಅನ್ನಿ' ಎಂದು ಕೆಜಿಎಫ್​​ ಬಗ್ಗೆ ಹೆಮ್ಮೆಯ ಮಾತುಗಳನ್ನಾಡಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.ಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ಮೊದಲ ಬಾರಿಗೆ ಮಗಳ ಫೋಟೋ ರಿವಿಲ್ ಮಾಡಿದ ಅನುಪ್ರಭಾಕರ್

ಬೆಂಗಳೂರು : ಸ್ಯಾಂಡಲ್ ವುಡ್ ನಟಿ ಅನುಪ್ರಭಾಕರ್ ಮಗುವಿಗೆ ಜನ್ಮ ನೀಡಿದ ನಂತರ ಇದೇ ಮೊದಲ ಬಾರಿಗೆ ತಮ್ಮ ...

news

ಸರ್ಕಾರ್ ಚಿತ್ರದ ದೃಶ್ಯಗಳಿಗೆ ಕತ್ತರಿ ಹಾಕುವಂತೆ ತಮಿಳುನಾಡಿನ ಸರ್ಕಾರ ವಾರ್ನಿಂಗ್ ಮಾಡಿದ್ಯಾಕೆ?

ಚೆನ್ನೈ : ತಮಿಳಿನ ಸ್ಟಾರ್ ನಟ ವಿಜಯ್ ಅಭಿನಯದ ‘ಸರ್ಕಾರ್’ ಚಿತ್ರದ ಕೆಲವು ದೃಶ್ಯಗಳನ್ನು ತೆಗೆದುಹಾಕುವಂತೆ ...

news

ದೀಪಾವಳಿಗೆ ಶುಭಕೋರಿದ ದಿಶಾ ಪಟಾನಿ ಮೇಲೆ ಗರಂ ಆದ ಅಭಿಮಾನಿಗಳು

ಮುಂಬೈ : ಅಭಿಮಾನಿಗಳಿಗೆ ದೀಪಾವಳಿ ಶುಭಾಶಯ ಕೋರಿದ ಬಾಲಿವುಡ್ ನಟಿ ದಿಶಾ ಪಟಾನಿ ಮೇಲೆ ಅಭಿಮಾನಿಗಳು ...

news

ರಜನೀಕಾಂತ್ ನಟಿಸಿದ ‘ಕಾಲಾ’ ಚಿತ್ರದಂತೆ ‘2.0’ ಸಿನಿಮಾಕ್ಕೂ ಕರ್ನಾಟಕದಲ್ಲಿ ಸಂಕಷ್ಟ

ಬೆಂಗಳೂರು : ತಮಿಳು ಚಿತ್ರರಂಗದ ಸೂಪರ್ ಸ್ಟಾರ್ ರಜನೀಕಾಂತ್ ನಟಿಸಿದ 2.0 ಸಿನಿಮಾ ಕರ್ನಾಟಕದಲ್ಲಿ ಬಿಡುಗಡೆ ...