ಬೆಂಗಳೂರು: ನವರಸನಾಯಕ ಜಗ್ಗೇಶ್ ಸಾಮಾಜಿಕ ಜಾಲತಾಣದಲ್ಲಿ ತಮ್ಮ ಜೀವನದ ಎಲ್ಲಾ ಆಗು-ಹೋಗುಗಗಳನ್ನು ತೆರೆದ ಪುಸ್ತಕದಂತೆ ಬಿಚ್ಚಿಡುತ್ತಾರೆ. ಇದೀಗ ನಿರ್ದೇಶಕರ ದಿನವಾದ ನಿನ್ನೆಯೂ ಜಗ್ಗೇಶ್ ಕುತೂಹಲಕಾರಿ ವಿಚಾರವೊಂದನ್ನು ಬಿಚ್ಚಿಟ್ಟಿದ್ದಾರೆ. ನಿರ್ದೇಶಕನಾಗಲು 1980 ರಲ್ಲಿ ಚಿತ್ರರಂಗಕ್ಕೆ ಬಂದೆ. ಆದರೆ ನಟನೆ ಕೈ ಹಿಡಿಯಿತು. ಆದರೆ ಕನ್ನಡ ಚಿತ್ರರಂಗಕ್ಕೆ ಸುಮಾರು 20 ನಿರ್ದೇಶಕರನ್ನು ನೀಡಿದ ಹೆಮ್ಮೆ ನನ್ನದು. ಇವರಲ್ಲಿ ಒಬ್ಬರಿಗೆ ಹೆಸರು ಸಿಗಲಿ ಎಂದು ನಾನೇ ಸಿನಿಮಾ ನಿರ್ಮಾಣ, ನಿರ್ದೇಶನ ಮಾಡಿ ಹೆಸರು ಅವರಿಗೆ