ನಿರ್ಭಯಾ ಹಂತಕರ ಹ್ಯಾಂಗ್ ಮ್ಯಾನ್ ಗೆ ನಟ ಜಗ್ಗೇಶ್ ಆರ್ಥಿಕ ನೆರವು

ಬೆಂಗಳೂರು| Krishnaveni K| Last Modified ಶುಕ್ರವಾರ, 10 ಜನವರಿ 2020 (09:43 IST)
ಬೆಂಗಳೂರು: ದೆಹಲಿ ಗ್ಯಾಂಗ್ ರೇಪ್ ಪ್ರಕರಣದಲ್ಲಿ ಗಲ್ಲು ಶಿಕ್ಷೆಗೊಳಗಾದ ಆರೋಪಿಗಳಿಗೆ ಶಿಕ್ಷೆ ಜಾರಿಗೊಳಿಸಲು ನೆರವಾಗುತ್ತಿರುವ ಹೊಣೆ ಹೊತ್ತಿರುವ ಪವನ್ ಜಲ್ಲಾದ್ ಜೀವನದ ಸಂಕಷ್ಟಕ್ಕೆ ನೆರವಾಗಲು ನಟ ಜಗ್ಗೇಶ್ ಮುಂದಾಗಿದ್ದಾರೆ.
 

ನಿರ್ಭಯಾ ಹಂತಕರನ್ನು ಗಲ್ಲಿಗೇರಿಸಲಿರುವ ಹ್ಯಾಂಗ್ ಮ್ಯಾನ್ ಪವನ್ ಜಲ್ಲಾದ್ ಮೂಲತಃ ಉತ್ತರ ಪ್ರದೇಶದವರು. ಅವರ ವೈಯಕ್ತಿಕ ಜೀವನದಲ್ಲಿ ಸಂಕಷ್ಟಗಳ ಸರಮಾಲೆಯೇ ಇದೆ. ಆರ್ಥಿಕವಾಗಿ ಸಂಕಷ್ಟದಲ್ಲಿರುವ ಪವನ್ ಮಗಳ ಮದುವೆ ಮಾಡಿಸಲು ಪರದಾಡುತ್ತಿದ್ದಾರೆ. ಯಾವುದಾದರೂ ಒಂದು ದಾರಿ ತೋರಿಸಲು ಎಂದು ದೇವರಲ್ಲಿ ಪ್ರಾರ್ಥಿಸುತ್ತಿದ್ದಾಗ ದೇವರೇ ನನಗೆ ಗಲ್ಲಿಗೇರಿಸುವ ಕೆಲಸ ನೀಡಿದ್ದಾನೆ. ಅದರಲ್ಲಿ ಬಂದ ಹಣದಲ್ಲಿ ಮಗಳ ಮದುವೆ ಮಾಡಿಸುತ್ತೇನೆ ಎಂದು ಪವನ್ ಮಾಧ್ಯಮಗಳ ಮುಂದೆ ಹೇಳಿಕೊಂಡಿದ್ದರು.
 
ಈ ವಿಚಾರ ನವರಸನಾಯಕ ಜಗ್ಗೇಶ್ ಕಿವಿಗೂ ಬಿದ್ದಿದೆ. ಇದೀಗ ಪವನ್ ಮಗಳ ಮದುವೆಗೆ ಆರ್ಥಿಕವಾಗಿ ನೆರವಾಗಲು ಜಗ್ಗೇಸ್ ಮುಂದೆ ಬಂದಿದ್ದಾರೆ. ರಾಕ್ಷಸರ ಸಂಹಾರ ದೇವರ ನಿಯಮ. ಆ ಕಾರ್ಯದಿಂದ ಬಂದ ಹಣದಿಂದ ನಿಮ್ಮ ಮಗಳ ಮದುವೆ ಮಾಡುವೆ ಎಂದು ಕೇಳಿ ಭಾವುಕನಾದೆ. ನೀವೇ ಆ ಪಾಪಿಗಳನ್ನು ನೇಣಿಗೇರಿಸಿದರೆ ನಾನು ಕಲೆಯಿಂದ ದುಡಿದ 1 ಲಕ್ಷ ರೂ.ಗಳನ್ನು ನಿಮಗೆ ದೇಣಿಗೆಯಾಗಿ ನಿಮ್ಮ ಮಗಳ ಮದುವೆಗೆ ನೀಡುವೆ. ಇಂದೇ ಆ ಹಣವನ್ನು ನಿಮಗಾಗಿ ಮೀಸಲಿಡುತ್ತೆನೆ’ ಎಂದು ಜಗ್ಗೇಶ್ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.
ಇದರಲ್ಲಿ ಇನ್ನಷ್ಟು ಓದಿ :