ಬೆಂಗಳೂರು: ನವರಸನಾಯಕ ಜಗ್ಗೇಶ್ ವೈಯಕ್ತಿಕ ಜೀವನದಲ್ಲಿ ತಾತನಾಗಿದ್ದರೂ ಇಂದಿಗೂ ಶಿಸ್ತಿನ ಊಟೋಪಚಾರದಿಂದ ಅದೇ ಮೈಕಟ್ಟು ಉಳಿಸಿಕೊಂಡಿದ್ದಾರೆ. ಆಗಾಗ ತಮ್ಮ ಆಹಾರ ಕ್ರಮವೇ ತಮ್ಮ ಯೌವನದ ಗುಟ್ಟು ಎನ್ನುವ ಜಗ್ಗೇಶ್ ಈಗ ವರ್ಕೌಟ್ ಮಾಡಲಿದ್ದಾರೆ. ಇದಕ್ಕಾಗಿ ಜಿಮ್ ನಲ್ಲಿ ವರ್ಕೌಟ್ ಮಾಡಲಿದ್ದಾರಂತೆ. ಸಾಧಿಸಲು ವಯಸ್ಸು ಲೆಕ್ಕವೇ ಅಲ್ಲ. ಬೆವರು ಹರಿಸಿ ಮೈಕಟ್ಟು ಬಿಗಿಗೊಳಿಸಲು ಅಣಿಯಾಯಿತು. ಸೋಮವಾರದಿಂದ ಹೊಸ ರೀತಿಯ ವ್ಯಾಯಾಮ ಶುರು ಮಾಡುವೆ. ನಿಮ್ಮ ಪ್ರೀತಿಗಾಗಿ ಇನ್ನೊಂದು 20 ವರ್ಷ ಜಮಾಯಿಸುವೆ