ಅರಿವಿಲ್ಲದೇ ಚಿತ್ರೀಕರಿಸಿದ ವಿಡಿಯೋ: ಜಗ್ಗೇಶ್ ಬೇಸರ

ಬೆಂಗಳೂರು| Krishnaveni K| Last Modified ಸೋಮವಾರ, 18 ಜನವರಿ 2021 (09:35 IST)
ಬೆಂಗಳೂರು: ತಮ್ಮ ಅರಿವಿಗೆ ಬಾರದೇ ಯೂ ಟ್ಯೂಬ್ ಚಾನೆಲ್ ನವರು ವಿಡಿಯೋ ಚಿತ್ರೀಕರಿಸಿ ವೈರಲ್ ಮಾಡಿದ್ದಕ್ಕೆ ನವರಸನಾಯಕ ಜಗ್ಗೇಶ್ ಬೇಸರ ವ್ಯಕ್ತಪಡಿಸಿದ್ದಾರೆ.
 

ಕೇಳಿದ್ದರೆ ನಾನೇ ಮಾತನಾಡಿಸುತ್ತಿದ್ದೆ. ಆದರೆ ನನಗೆ ಅರಿವಿಲ್ಲದೇ ಚಿತ್ರೀಕರಿಸಿದ್ದು ಬೇಸರವಾಗಿದೆ. ಇದೇ ಕಾರಣಕ್ಕೇ ಬೇರೆ ಕಲಾವಿದರು ಸಾರ್ವಜನಿಕವಾಗಿ ಬೆರೆಯಲು ಹಿಂಜರಿಯುತ್ತಾರೆ. ಅಭಿಮಾನದ ರೂಪದಲ್ಲಿ ಇಂಥಾ ನಡೆ ಸಲ್ಲದು ಎಂದು ಜಗ್ಗೇಶ್ ಹೇಳಿದ್ದಾರೆ. ಅನುಮತಿ ಇಲ್ಲದೇ ಜಗ್ಗೇಶ್ ಅವರ ವಿಡಿಯೋ ಮಾಡಿ ಈ ರೀತಿ ವೈರಲ್ ಮಾಡಿದ್ದಕ್ಕೆ ಅವರ ಅಭಿಮಾನಿ ಸಂಘ ಆಕ್ರೋಶ ವ್ಯಕ್ತಪಡಿಸಿತ್ತು.
ಇದರಲ್ಲಿ ಇನ್ನಷ್ಟು ಓದಿ :