ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ ಕೊನೆಯ ಚಿತ್ರ ಜೇಮ್ಸ್ ಬಿಡುಗಡೆಯತ್ತ ಚಿತ್ರತಂಡ ಗಮನಹರಿಸಿದೆ. ಇದು ಅಪ್ಪು ಅಭಿಮಾನಿಗಳ ಪಾಲಿಗೆ ಬಹುದೊಡ್ಡ ಕಾಣಿಕೆಯಾಗಲಿದೆ.ಜೇಮ್ಸ್ ಚಿತ್ರೀಕರಣ ಬಹುತೇಕ ಮುಕ್ತಾಯವಾಗಿತ್ತು. ಆದರೆ ಕೆಲವು ಭಾಗ ಬಾಕಿಯಾಗಿತ್ತು. ಶೂಟಿಂಗ್ ನ್ನು ಮುಗಿಸಿ ಪೋಸ್ಟ್ ಪ್ರೊಡಕ್ಷನ್ ನತ್ತ ಗಮನ ಹರಿಸಲು ಚಿತ್ರತಂಡ ಸಜ್ಜಾಗಿದೆ.ನಿನ್ನೆಯಿಂದ ಮತ್ತೆ ಉಳಿದ ಭಾಗದ ಚಿತ್ರೀಕರಣ ನಡೆದಿದ್ದು, ಮುಂದಿನ ವರ್ಷಕ್ಕೆ ಪುನೀತ್ ಜನ್ಮದಿನದ ಸಂದರ್ಭದಲ್ಲಿ ಚಿತ್ರ ಬಿಡುಗಡೆಯಾಗಬಹುದು ಎಂಬ ನಿರೀಕ್ಷೆಯಿದೆ.