‘ಸರ್ಕಾರ್’ ಸಿನಿಮಾದಲ್ಲಿ ಜಯಲಲಿತಾಗೆ ಅವಮಾನ; ಚಿತ್ರ ಪ್ರದರ್ಶನ ತಡೆಹಿಡಿದ ಜಯಾ ಬೆಂಬಲಿಗರು

ಚೆನ್ನೈ, ಶುಕ್ರವಾರ, 9 ನವೆಂಬರ್ 2018 (09:27 IST)

ಚೆನ್ನೈ : ತಮಿಳಿನ ಸ್ಟಾರ್ ನಟ ವಿಜಯ್ ಅಭಿನಯದ ‘ಸರ್ಕಾರ್’ ಸಿನಿಮಾವನ್ನು ಪ್ರದರ್ಶನ ಮಾಡಬಾರದು ಎಂದು  ಎಐಎಡಿಎಂಕೆ ಕಾರ್ಯಕರ್ತರು ಮಧುರೈ ಹಾಗೂ ಕೊಯಮತ್ತೂರಿನ ಸಿನಿಮಾಮಂದಿರಗಳ ಮುಂದೆ ಗುರುವಾರ ಪ್ರತಿಭಟನೆ ಮಾಡಿದ್ದಾರೆ.

ಕರುಣಾನಿಧಿ ಕುಟುಂಬವು ಸರ್ಕಾರ್ ಸಿನಿಮಾ ನಿರ್ಮಾಣಕ್ಕೆ ಹಣ ಹೂಡಿರುವುದರಿಂದ ಚುನಾವಣೆ ಉದ್ದೇಶ ಇಟ್ಟುಕೊಂಡೇ ರಾಜಕೀಯ ಪಕ್ಷಗಳು ಕೊಡುವ ಮಿಕ್ಸಿ, ಗ್ರೈಂಡರ್​, ಕಲರ್​ ಟಿವಿಯಂಥ ಉಡುಗೊರೆಗಳನ್ನು ಜನ ಬೀದಿಗೆ ಎಸೆಯುವ ದೃಶ್ಯಗಳನ್ನು ಸೇರಿಸಲಾಗಿದೆ ಎಂದು ಎಐಎಡಿಎಂಕೆ ನಾಯಕರು ಬುಧವಾರ ಆರೋಪಿಸಿದ್ದರು. 

 

ಆದರೆ ಇದೀಗ ಸರ್ಕಾರ್’ ಸಿನಿಮಾದಲ್ಲಿದ್ದ ಈ ದೃಶ್ಯಗಳ ಮೂಲಕ  ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರಿಗೆ ಅವಹೇಳನ ಮಾಡಲಾಗಿದೆ, ಎಂದು ಪಟ್ಟು ಹಿಡಿದ ಕಾರ್ಯಕರ್ತರು ಮದುರೈನ ಥಿಯೇಟರ್​ವೊಂದರಲ್ಲಿ 2.30ರ ಪ್ರದರ್ಶನವನ್ನು ತಡೆಹಿಡಿದಿದ್ದಾರೆ.

 

ಅಲ್ಲದೇ ಕೊಯಮತ್ತೂರಿನ ಸಿನಿಮಾ ಮಂದಿರ ಹಾಗೂ ಚೆನ್ನೈನ ಕಾಸಿ ಥಿಯೇಟರ್​​ನ ಎದುರು ಅಂಟಿಸಲಾಗಿದ್ದ ಸರ್ಕಾರ್​ ಸಿನಿಮಾದ ಪೋಸ್ಟರ್​ಗಳನ್ನು ಜಯಾ ಬೆಂಬಲಿಗರು ಹರಿದು ಹಾಕಿರುವುದಾಗಿಯೂ ವರದಿಯಾಗಿದೆ.

 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.ಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ಶೂಟಿಂಗ್ ಗಾಗಿ ತೆರಳುತ್ತಿದ್ದ ಪುನೀತ್ ರಾಜ್ ಕುಮಾರ್ ಮಾರ್ಗಮಧ್ಯದಲ್ಲಿ ಅತ್ತಿಗುಂಡಿ ಗ್ರಾಮಕ್ಕೆ ಹೋಗಿದ್ಯಾಕೆ ಗೊತ್ತಾ?

ಬೆಂಗಳೂರು : ಶೂಟಿಂಗ್ ಗಾಗಿ ತೆರಳುತ್ತಿದ್ದ ಸ್ಯಾಂಡಲ್ ವುಡ್ ನ ಸ್ಟಾರ್ ನಟ ಪುನೀತ್ ರಾಜ್ ಕುಮಾರ್ ಅವರು ...

news

ಕೆಜಿಎಫ್ ಚಿತ್ರ ತುಳಿಯಲು ಸಾಥ್ ನೀಡುವವರಿಗೆ ತಕ್ಕ ಉತ್ತರ ಕೊಟ್ಟ ನಟ ಜಗ್ಗೇಶ್

ಬೆಂಗಳೂರು : ಬಾಲಿವುಡ್ ನ ಬಾದ್ ಶಾ ಶಾರುಖ್ ಖಾನ್ ಹಾಗೂ ಸ್ಯಾಂಡಲ್ ವುಡ್ ನಟ ರಾಕಿಂಗ್ ಸ್ಟಾರ್ ಯಶ್ ...

news

ಮೊದಲ ಬಾರಿಗೆ ಮಗಳ ಫೋಟೋ ರಿವಿಲ್ ಮಾಡಿದ ಅನುಪ್ರಭಾಕರ್

ಬೆಂಗಳೂರು : ಸ್ಯಾಂಡಲ್ ವುಡ್ ನಟಿ ಅನುಪ್ರಭಾಕರ್ ಮಗುವಿಗೆ ಜನ್ಮ ನೀಡಿದ ನಂತರ ಇದೇ ಮೊದಲ ಬಾರಿಗೆ ತಮ್ಮ ...

news

ಸರ್ಕಾರ್ ಚಿತ್ರದ ದೃಶ್ಯಗಳಿಗೆ ಕತ್ತರಿ ಹಾಕುವಂತೆ ತಮಿಳುನಾಡಿನ ಸರ್ಕಾರ ವಾರ್ನಿಂಗ್ ಮಾಡಿದ್ಯಾಕೆ?

ಚೆನ್ನೈ : ತಮಿಳಿನ ಸ್ಟಾರ್ ನಟ ವಿಜಯ್ ಅಭಿನಯದ ‘ಸರ್ಕಾರ್’ ಚಿತ್ರದ ಕೆಲವು ದೃಶ್ಯಗಳನ್ನು ತೆಗೆದುಹಾಕುವಂತೆ ...