ದರ್ಶನ್ ಅಭಿಮಾನಿಗಳ ವಿರುದ್ಧ ಜೆಡಿಎಸ್ ದೂರು

ಬೆಂಗಳೂರು| Krishnaveni K| Last Updated: ಮಂಗಳವಾರ, 20 ಜುಲೈ 2021 (18:01 IST)
ಬೆಂಗಳೂರು: ದರ್ಶನ್-ಇಂದ್ರಜಿತ್ ಲಂಕೇಶ್ ಕಿತ್ತಾಟದ ನಡುವೆ ತಮ್ಮ ನಾಯಕ ಎಚ್. ಡಿ. ಕುಮಾರಸ್ವಾಮಿಯವರನ್ನು ಟ್ರೋಲ್ ಮಾಡಿದ ದರ್ಶನ್ ಅಭಿಮಾನಿಗಳ ವಿರುದ್ಧ ಜೆಡಿಎಸ್ ಮತ್ತು ಇಂದ್ರಜಿತ್ ಬೆಂಬಲಿಗರು ದೂರು ನೀಡಿದ್ದಾರೆ.

 
ಇಂದ್ರಜಿತ್ ಲಂಕೇಶ್ ಕುಮಾರಸ್ವಾಮಿಯವರನ್ನು ಭೇಟಿ ಮಾಡಿದ ಫೋಟೋವನ್ನು ಶೇರ್ ಮಾಡಿದ್ದ ಟ್ರೋಲ್ ಮಗಾ ಎಂಬ ಇನ್ ಸ್ಟಾಗ್ರಾಂ ಪೇಜ್ ಇಬ್ಬರ ಬಗ್ಗೆ ಅವಹೇಳನಕಾರಿಯಾದ ಸಾಲು ಬರೆದಿತ್ತು. ಇದಲ್ಲದೆ, ದರ್ಶನ್ ಅಭಿಮಾನಿಗಳ ಹಲವು ಸಾಮಾಜಿಕ ಜಾಲತಾಣಗಳಲ್ಲೂ ಇಂದ್ರಜಿತ್ ಬಗ್ಗೆ ಆಕ್ಷೇಪಾರ್ಹ ಪೋಸ್ಟ್ ಪ್ರಕಟವಾಗಿತ್ತು.
 
ಈ ಹಿನ್ನಲೆಯಲ್ಲಿ ಜೆಡಿಎಸ್ ನಾಯಕರು ಟ್ರೋಲ್ ಮಗಾ ಪೇಜ್ ವಿರುದ್ಧ ದೂರು ದಾಖಲಿಸಿದರೆ, ಅತ್ತ ಇಂದ್ರಜಿತ್ ಹಿಂಬಾಲಕರೂ ದರ್ಶನ್ ಅಭಿಮಾನಿಗಳ ವಿರುದ್ಧ ದೂರು ನೀಡಿದ್ದಾರೆ.
ಇದರಲ್ಲಿ ಇನ್ನಷ್ಟು ಓದಿ :