ಕನ್ನಡದ ವಿಚಾರವಾಗಿ ಟ್ರೋಲ್ ಮಾಡಿದವರಿಗೆ ತಿರುಗೇಟು ಕೊಟ್ಟ ನಟ ಜೆಕೆ

ಬೆಂಗಳೂರು| Krishnaveni K| Last Modified ಶುಕ್ರವಾರ, 1 ನವೆಂಬರ್ 2019 (08:49 IST)
ಬೆಂಗಳೂರು: ಸೆಲೆಬ್ರಿಟಿಗಳು ಕನ್ನಡ ವಿಚಾರಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣದಲ್ಲಿ ಆಗಾಗ ಟ್ರೋಲ್ ಗೊಳಗಾಗುತ್ತಲೇ ಇರುತ್ತಾರೆ. ಇದೀಗ ನಟ ಜಯರಾಮ್ ಕಾರ್ತಿಕ್ ಅಲಿಯಾಸ್ ಜೆಕೆ ಕೂಡಾ ಇದೇ ಕಾರಣಕ್ಕೆ ಟ್ರೋಲ್ ಆಗಿದ್ದಾರೆ.

 
ಆದರೆ ಟ್ರೋಲ್ ಮಾಡಿದವರಿಗೆ ತಿರುಗೇಟನ್ನೂ ಕೊಟ್ಟಿದ್ದಾರೆ. ಇಂದು ಜೆಕೆ ಅಭಿನಯಿಸಿರುವ ರವಿ ಬಸ್ರೂರು ಸಂಗೀತ ನಿರ್ದೇಶನದ ಕನ್ನಡ ಭಾಷೆಯ ಕುರಿತಾದ ಆಲ್ಬಂ ಹಾಡೊಂದು ಬಿಡುಗಡೆಯಾಗುತ್ತಿದೆ. ಈ ಬಗ್ಗೆ ಜೆಕೆ ತಮ್ಮ ಇನ್ ಸ್ಟಾಗ್ರಾಂ ಪುಟದಲ್ಲಿ ಬರೆದುಕೊಂಡಿದ್ದರು.
 
ಆದರೆ ಜೆಕೆ ಕನ್ನಡದ ಬಗ್ಗೆ ಇಂಗ್ಲಿಷ್ ಭಾಷೆಯಲ್ಲಿ ಬರೆದುಕೊಂಡಿದ್ದಕ್ಕೆ ನೆಟ್ಟಿಗರು ಇದನ್ನು ಕನ್ನಡದಲ್ಲಿ ಬರೆಯಿರಿ ಎಂದು ಕಾಲೆಳೆದಿದ್ದಾರೆ. ಇದಕ್ಕೆ ಜೆಕೆ ಪ್ರತಿಕ್ರಿಯಿಸಿದ್ದು, ಕನ್ನಡ ಗೊತ್ತಿಲ್ಲದೇ ಇರೋರಿಗೆ ಅಂತ ಇದನ್ನು ಬರೆದಿದ್ದು. ಮೊದಲು ಗೂಗಲ್ ಅವರಿಗೆ ಹೇಳಿ ಸಾಫ್ಟ್ ವೇರ್ ಪ್ರೋಗ್ರಾಮಿಂಗ್ ಕನ್ನಡದಲ್ಲೇ ಮಾಡಿ ಅಂತ. ಕನ್ನಡದಲ್ಲಿ ಅವರು ಸಾಫ್ಟ್ ವೇರ್ ಮಾಡೋವರೆಗೂ ನೀವು ಇನ್ ಸ್ಟಾಗ್ರಾಂ ಬಳಸಬೇಡಿ ಎಂದು ತಿರುಗೇಟು ನೀಡಿದ್ದಾರೆ.
ಇದರಲ್ಲಿ ಇನ್ನಷ್ಟು ಓದಿ :