ಬೆಂಗಳೂರು: ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುವ ಮಜಾ ಟಾಕೀಸ್ ಈ ವಾರ ಪ್ರೇಕ್ಷಕರು ಕುತೂಹಲದಿಂದ ಎದುರು ನೋಡುವಂತೆ ಮಾಡಿತ್ತು. ಅದಕ್ಕೆ ಕಾರಣ ಹಾಸ್ಯ ನಟ ಜಾನಿ ಲಿವರ್.ಬಹುಭಾಷಾ ತಾರೆ ಜಾನಿ ಲಿವರ್ ಮಜಾ ಟಾಕೀಸ್ ಮನೆಗೆ ಬಂದಿದ್ದು ನೋಡಿ ಪ್ರೇಕ್ಷಕರು ಈ ಶೋ ನೋಡಲು ಭಾರೀ ಕಾತುರರಾಗಿದ್ದರು. ಇದೀಗ ಶೋ ನೋಡಿದ ಜನ ಜಾನಿ ಲಿವರ್ ಹಾಸ್ಯದ ಹೊನಲು ನೋಡಿ ಹೊಟ್ಟೆ ಹುಣ್ಣಾಗುವಂತೆ ನಕ್ಕಿದ್ದಾರೆ. ತಮ್ಮ ಬಾಲ್ಯದ ದಿನಗಳಲ್ಲಿ ಅನುಭವಿಸಿದ ಕಷ್ಟಗಳನ್ನೂ