ಹೈದರಾಬಾದ್: ಜ್ಯೂ.ಎನ್ ಟಿಆರ್ ನಾಯಕರಾಗಿರುವ ಬಹು ನಿರೀಕ್ಷಿತ ದೇವರ ಸಿನಿಮಾ ಟೀಸರ್ ಇಂದು ಬಿಡುಗಡೆಯಾಗುತ್ತಿದ್ದು, ಫ್ಯಾನ್ಸ್ ಕುತೂಹಲದಿಂದ ಕಾಯುತ್ತಿದ್ದಾರೆ. ದೇವರ ಫಸ್ಟ್ ಲುಕ್ ಹೊಸ ವರ್ಷದಂದು ಬಿಡುಗಡೆಯಾಗಿತ್ತು. ಸಮುದ್ರದಲ್ಲಿ ಶಿಪ್ ನಲ್ಲಿ ಏಕಾಂಗಿ ವಾರಿಯರ್ ನಂತೆ ನಿಂತಿರುವ ಜ್ಯೂ.ಎನ್ ಟಿಆರ್ ಫೋಟೋ ಪ್ರಕಟಿಸಲಾಗಿತ್ತು. ಆ ಸಂದರ್ಭದಲ್ಲಿ ಚಿತ್ರತಂಡ ಟೀಸರ್ ರಿಲೀಸ್ ದಿನಾಂಕವನ್ನೂ ಘೋಷಿಸಿತ್ತು. ಇಂದು ಸಂಜೆ 4.05 ಕ್ಕೆ ದೇವರ ಸಿನಿಮಾ ಟೀಸರ್ ಬಿಡುಗಡೆಯಾಗುತ್ತಿದೆ. ಮೂಲಗಳ ಪ್ರಕಾರ ದೇವರ ಟೀಸರ್ ನಲ್ಲಿ ಹಿಂದೆಂದೂ ಕಾಣದಂತಹ ತಾಂತ್ರಿಕ ಶ್ರೀಮಂತಿಕೆ ಕಂಡುಬರಲಿದೆ.