ಟಾಲಿವುಟ್ ಸೂಪರ್ ಸ್ಟಾರ್ ಯಂಗ್ ಟೈಗರ್ ಜೂನಿಯರ್ ಎನ್`ಟಿಆರ್ ಬಾಯಲ್ಲಿ ಆಗಾಗ್ಗೆ ಕನ್ನಡದ ಪದಗಳು ನಲಿದಾಡುತ್ತಿರುತ್ತವೆ. ಐಫಾ ಚಿತ್ರೋತ್ಸವದಲ್ಲೂ ಕನ್ನಡದಲ್ಲಿ ಮಾತನಾಡಿದ್ದ ಯಂಗ್ ಟೈಗರ್, ಬಿಗ್ ಬಾಸ್ ಶೋನಲ್ಲಿ ಕನ್ನಡದಲ್ಲಿ ಮಾತನಾಡಿ ಗಮನ ಸೆಳೆದಿದ್ದಾರೆ. ಹೌದು, ಬಿಗ್ ಬಾಸ್ ಶೋನಲ್ಲಿ ಇಬ್ಬರು ಸ್ಪರ್ಧಿಗಳ ಜೊತೆ ಮಾತನಾಡಿರುವ ಜೂನಿಯರ್ ಎನ್`ಟಿಆರ್, ನೀವು ಕನ್ನಡ ತುಂಬಾ ಚೆನ್ನಾಗಿ ಮಾತನಾಡುತ್ತಿದ್ದೀರಿ. ನೀವಿಬ್ಬರೂ ಕನ್ನಡಿಗರಾ..? ಎಂದು ಹೇಳಿದ್ದಾರೆ. ಸ್ಪರ್ಧಿಗಳು, ಹೌದು ನಾವು ಕನ್ನಡಿಗರು ಅವರು ಕನ್ನಡಿಗರು