ಬೆಂಗಳೂರು : ಸ್ಯಾಂಡಲ್ ವುಡ್ ನಟ ರಾಕಿಂಗ್ ಸ್ಟಾರ್ ಯಶ್ ಹಾಗೂ ನಟಿ ರಾಧಿಕಾ ಪಂಡಿತ್ ದಾಂಪತ್ಯ ಜೀವನಕ್ಕೆ ಕಾಲಿಟ್ಟು 2 ವರ್ಷ ಕಳೆದಿದೆ. ಆದರೆ ಈವರೆಗೂ ಮಗುವಿನ ಬಗ್ಗೆ ಯಾವುದೇ ಸಿಹಿ ಸುದ್ದಿ ನೀಡಿಲ್ಲ. ಆದರೆ ಈ ಬಗ್ಗೆ ಇದೀಗ ನಟ ಯಶ್ ಅವರು ಮನಬಿಚ್ಚಿ ಮಾತನಾಡಿದ್ದಾರೆ. ರಾಕಿಂಗ್ ಸ್ಟಾರ್ ಯಶ್ ಇತ್ತೀಚಿಗಷ್ಟೆ ಕನ್ನಡದ ಕೋಟ್ಯಧಿಪತಿ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಆಗಮಿಸಿದ್ದರು. ಅದ್ಭುತವಾಗಿ ಆಟವಾಡಿ 25 ಲಕ್ಷ ಗೆದ್ದುಕೊಂಡು ಹೋದರು.