ಬೆಂಗಳೂರು: ಪ್ರೇಮಕವಿ ಎಂದೇ ಖ್ಯಾತರಾಗಿರುವ ಚಿತ್ರಸಾಹಿತಿ ಕೆ.ಕಲ್ಯಾಣ್ ವೈವಾಹಿಕ ಬದುಕು ಮುರಿದು ಬೀಳುವ ಹಂತದಲ್ಲಿದೆ. ಕಲ್ಯಾಣ್ ವಿರುದ್ಧ ಆರೋಪ ಮಾಡಿರುವ ಪತ್ನಿ ಪೊಲೀಸ್ ಠಾಣೆ ಮಟ್ಟಿಲೇರಿದ್ದಾರೆ. 2005 ರಲ್ಲಿ ಕಲ್ಯಾಣ್-ಅಶ್ವಿನಿ ಮದುವೆಯಾಗಿದ್ದರು. ಇದೀಗ ತನ್ನ ಗಂಡ ತನಗೆ ಕಿರುಕುಳ ನೀಡುತ್ತಿದ್ದಾನೆಂದು ಆರೋಪಿಸಿ ಅಶ್ವಿನಿ ಬೆಳಗಾವಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ವೈಯಕ್ತಿಕ ಸಮಸ್ಯೆಯಿಂದಾಗಿ ಕಳೆದ ಆರು ತಿಂಗಳಿನಿಂದ ಈ ದಂಪತಿ ಪ್ರತ್ಯೇಕವಾಗಿ ವಾಸಿಸುತ್ತಿದ್ದಾರೆ ಎನ್ನಲಾಗಿದೆ. ನಡು ರಾತ್ರಿ ಮನೆಗೆ ಬಂದು