ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ನಾಯಕರಾಗಿರುವ ಕಾಟೇರ ಸಿನಿಮಾದ ಬಿಗ್ ಅಪ್ ಡೇಟ್ ಒಂದು ಇಂದು ಸಿಗುವ ನಿರೀಕ್ಷೆಯಿದೆ.ಡಿಸೆಂಬರ್ 29 ರಂದು ಕಾಟೇರ ಸಿನಿಮಾ ಥಿಯೇಟರ್ ಗಳಲ್ಲಿ ಬಿಡುಗಡೆಯಾಗುತ್ತಿದೆ. ಈಗಾಗಲೇ ಅಭಿಮಾನಿಗಳು ಕಾಟೇರ ಸಿನಿಮಾಗಾಗಿ ಕಾದು ಕುಳಿತಿದ್ದಾರೆ.ಚಿತ್ರತಂಡ ಇದುವರೆಗೆ ಎರಡು ಹಾಡುಗಳನ್ನು ಬಿಡುಗಡೆ ಮಾಡಿದೆ. ಆದರೆ ಎಲ್ಲರೂ ಎದಿರು ನೋಡುತ್ತಿರುವುದು ಕಾಟೇರ ಸಿನಿಮಾದ ಟ್ರೈಲರ್ ಗಾಗಿ. ಟ್ರೈಲರ್ ಬಿಡುಗಡೆ ಯಾವಾಗ ಎಂಬ ಪ್ರಶ್ನೆಗೆ ಇಂದು ಉತ್ತರ ಸಿಗುವ ನಿರೀಕ್ಷೆಯಿದೆ. ಇಂದು