ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಸಿನಿಮಾ ಬಿಡುಗಡೆಯಾಗುತ್ತದೆ ಎಂದರೆ ಅಭಿಮಾನಿಗಳಲ್ಲಿರುವ ಕ್ರೇಜ್ ಲೆವೆಲ್ ಬೇರೆಯೇ ಆಗಿರುತ್ತದೆ.ಇದೀಗ ಕಾಟೇರ ಸಿನಿಮಾ ಬಿಡುಗಡೆಗೂ ಮೊದಲೇ ಕಟೌಟ್ ಅಬ್ಬರ ಶುರುವಾಗಿದೆ. ದರ್ಶನ್ ನಾಯಕರಾಗಿ ನಟಿಸಿರುವ ತರುಣ್ ಸುಧೀರ್ ನಿರ್ದೇಶನದ ಕಾಟೇರ ಸಿನಿಮಾ ಡಿಸೆಂಬರ್ 29 ರಂದು ಥಿಯೇಟರ್ ನಲ್ಲಿ ಬಿಡುಗಡೆಯಾಗಲಿದೆ.ಈ ಸಿನಿಮಾ ಬಿಡುಗಡೆ ಇನ್ನೂ ಎರಡು ವಾರಕ್ಕೂ ಹೆಚ್ಚು ಸಮಯವಿದೆ. ಆದರೆ ಆಗಲೇ ಥಿಯೇಟರ್ ಗಳ ಮುಂದೆ ದರ್ಶನ್ ಬೃಹತ್ ಕಟೌಟ್ ಗಳು ರಾರಾಜಿಸುತ್ತಿದ್ದು,