ಬೆಂಗಳೂರು: ಬಹುನಿರೀಕ್ಷಿತ ಅಪ್ಪಟ ಕನ್ನಡ ಸಿನಿಮಾ ಚಾಲೆಂಜಿಂಗ್ ಸ್ಟಾರ್ ದರ್ಶನ್ ನಾಯಕರಾಗಿರುವ ಕಾಟೇರ ಇಂದಿನಿಂದ ಥಿಯೇಟರ್ ಗಳಲ್ಲಿ ಬಿಡುಗಡೆಯಾಗಿದೆ.ದರ್ಶನ್ ಗೆ ಅಭಿಮಾನಿಗಳು ಪ್ರೀತಿಯಿಂದ ಬಾಕ್ಸ್ ಆಫೀಸ್ ಸುಲ್ತಾನ್ ಎನ್ನುತ್ತಾರೆ. ಅದಕ್ಕೆ ಕಾರಣವೂ ಇಲ್ಲದಿಲ್ಲ. ಅವರ ಸಿನಿಮಾ ಬಿಡುಗಡೆ ಎಂದರೆ ಅಭಿಮಾನಿಗಳು ಮುಗಿಬಿದ್ದು ಥಿಯೇಟರ್ ಗೆ ಲಗ್ಗೆಯಿಡುತ್ತಾರೆ.ಕಾಟೇರ ಸಿನಿಮಾ ವಿಚಾರದಲ್ಲೂ ಇದೇ ಆಗಿದೆ. ಅಡ್ವಾನ್ಸ್ ಬುಕಿಂಗ್ ಗೇ ಭರ್ಜರಿ ಬೇಡಿಕೆ ಬಂದಿತ್ತು. ಮೈಸೂರು, ಬೆಂಗಳೂರು, ಮಂಡ್ಯ ಕಡೆ ಟಿಕೆಟ್ ಗಳು ಬಹುಬೇಗನೇ