ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ನಾಯಕರಾಗಿರುವ ಕಾಟೇರ ಸಿನಿಮಾದ ಟ್ರೈಲರ್ ಡಿಸೆಂಬರ್ 16 ರಂದು ಬಿಡುಗಡೆಯಾಗಲಿದೆ ಎಂದು ಈಗಾಗಲೇ ಚಿತ್ರತಂಡ ಘೋಷಿಸಿದೆ.ಈ ದಿನ ಕೇವಲ ಟ್ರೈಲರ್ ರಿಲೀಸ್ ಮಾತ್ರವಲ್ಲ, ಇದನ್ನು ಪ್ರಿ ರಿಲೀಸ್ ಕಾರ್ಯಕ್ರಮವಾಗಿ ಚಿತ್ರತಂಡ ಅದ್ಧೂರಿಯಾಗಿ ಜನರ ಮುಂದೆಯೇ ಸಂಭ್ರಮಾಚರಿಸಲಿದೆ. ದರ್ಶನ್ ಎಂದರೆ ಮಾಸ್ ಹೀರೋ. ಅವರ ಕಾರ್ಯಕ್ರಮಕ್ಕೆ ಜನ ಸಾಕಷ್ಟು ಸಂಖ್ಯೆಯಲ್ಲಿ ಸೇರುತ್ತಾರೆ.ಕಾಟೇರ ಚಿತ್ರದ ಪ್ರಿ ರಿಲೀಸ್ ಈವೆಂಟ್ ಕಾರ್ಯಕ್ರಮ ಡಿಸೆಂಬರ್ 16 ರಂದು ಹುಬ್ಬಳ್ಳಿಯಲ್ಲಿ ನಡೆಯುತ್ತಿದೆ.