ಬೆಂಗಳೂರು: ನಟ ದರ್ಶನ್ ಅಭಿನಯಿಸಿರುವ ಕಾಟೇರ ಸಿನಿಮಾ ಬಾಕ್ಸ್ ಆಫೀಸ್ ಗಳಿಕೆಯಲ್ಲಿ ಹೊಸ ದಾಖಲೆ ಬರೆಯಲು ಸಜ್ಜಾಗಿದೆ.ಕಾಟೇರ ಸಿನಿಮಾ ಡಿಸೆಂಬರ್ 29 ರಂದು ಥಿಯೇಟರ್ ನಲ್ಲಿ ಬಿಡುಗಡೆಯಾಗಿತ್ತು. ಸಿನಿಮಾ ಬಿಡುಗಡೆಯಾದ ಐದೇ ದಿನಕ್ಕೆ ಗಳಿಕೆ 86 ಕೋಟಿ ರೂ.ಗೆ ತಲುಪಿದೆ.ಕೇವಲ ಕನ್ನಡದಲ್ಲಿ ಮಾತ್ರ ಬಿಡುಗಡೆಯಾದ ಸಿನಿಮಾ ಐದೇ ದಿನಗಳಲ್ಲಿ ಇಷ್ಟು ಗಳಿಕೆ ಮಾಡಿದ್ದು ಇದೇ ಮೊದಲು. ಮೊದಲ ದಿನ ಸಿನಿಮಾ 19.75 ಕೋಟಿ ಗಳಿಕೆ ಮಾಡಿತ್ತು. ಭಾನುವಾರ ಗರಿಷ್ಠ 20