ಬೆಂಗಳೂರು: ಇತ್ತೀಚೆಗೆ ಬಹುನಿರೀಕ್ಷಿತ ಸಿನಿಮಾಗಳ ದೃಶ್ಯಗಳು ಆನ್ ಲೈನ್ ನಲ್ಲಿ ಬಿಡುಗಡೆಗೂ ಮುನ್ನವೇ ಸೋರಿಕೆಯಾಗುವ ಸಂಕಷ್ಟ ಸಾಮಾನ್ಯವಾಗಿದೆ.ಇದಕ್ಕೆ ಉತ್ತಮ ಉದಾಹರಣೆ ರಾಮ್ ಚರಣ್ ನಾಯಕರಾಗಿರುವ ಗೇಮ್ ಚೇಂಜರ್ ಸಿನಿಮಾ. ಈ ಸಿನಿಮಾದ ಸಾಹಸ ದೃಶ್ಯವೊಂದನ್ನು ಲೀಕ್ ಮಾಡಿದ್ದಕ್ಕೆ ಓರ್ವನನ್ನು ಬಂಧಿಸಲಾಗಿತ್ತು. ಕೊನೆಗೆ ದೃಶ್ಯ ಸೋರಿಕೆ ತಲೆನೋವಿನಿಂದ ತಪ್ಪಿಸಿಕೊಳ್ಳಲು ಚಿತ್ರತಂಡ ಚಿತ್ರೀಕರಣ ಸ್ಥಳವನ್ನೇ ಬದಲಾಯಿಸಬೇಕಾಯಿತು.ಇದೀಗ ಚಾಲೆಂಜಿಂಗ್ ಸ್ಟಾರ್ ದರ್ಶನ್ ನಾಯಕರಾಗಿರುವ ಕಾಟೇರ ಸಿನಿಮಾಗೂ ಇದೇ ಸಂಕಷ್ಟ ಎದುರಾಗಿದೆ. ಚಿತ್ರದಲ್ಲಿ ದರ್ಶನ್ ಅವರ