ಬೆಂಗಳೂರು: ಕಬ್ಜ ಟ್ರೈಲರ್ ರಿಲೀಸ್ ನಿನ್ನೆ ನಿಗದಿತ ಸಮಯಕ್ಕೆ ಬಿಡುಗಡೆಯಾಗದೇ ಪ್ರೇಕ್ಷಕರಲ್ಲಿ ಗೊಂದಲ ಮೂಡಿಸಿತು.ಎಲ್ಲಾ ಸರಿ ಹೋಗಿದ್ದರೆ ಸಂಜೆ 5.02 ಕ್ಕೆ ಎಲ್ಲಾ ಭಾಷೆಗಳಲ್ಲಿ ಟ್ರೈಲರ್ ರಿಲೀಸ್ ಆಗಬೇಕಿತ್ತು. ಆದರೆ ತಾಂತ್ರಿಕ ಕಾರಣಗಳಿಂದ ತಡವಾಯಿತು. ಕೊನೆಗೆ ರಾತ್ರಿ ಹಿಂದಿ ಭಾಷೆಯಲ್ಲಿ ಮಾತ್ರ ಟ್ರೈಲರ್ ರಿಲೀಸ್ ಆಯಿತು. ಕನ್ನಡ ಮೂಲ ಸಿನಿಮಾವಾಗಿದ್ದರೂ ಮೊದಲು ಕನ್ನಡದಲ್ಲಿ ಬಿಡುಗಡೆಯಾಗದೇ ಇದ್ದಿದ್ದು ಕನ್ನಡ ಪ್ರೇಕ್ಷಕರ ಸಿಟ್ಟಿಗೂ ಕಾರಣವಾಯಿತು.ಬಳಿಕ ತಡ ರಾತ್ರಿ ಕನ್ನಡ ಟ್ರೈಲರ್ ರಿಲೀಸ್ ಮಾಡಲಾಗಿದೆ.