ಚೆನ್ನೈ: ರಾಜಕೀಯ ಎಂಟ್ರಿಗೆ ತಯಾರಿ ನಡೆಸುತ್ತಿರುವ ಬಹುಭಾಷಾ ನಟ ಕಮಲ್ ಹಾಸನ್ ತಮ್ಮ ಜನ್ಮ ದಿನದಂದು ಅಭಿಮಾನಿಗಳಿಗೆ ಸಪ್ರೈಸ್ ನೀಡಲು ತಯಾರಾಗಿದ್ದಾರೆ. ನ.7 ರಂದು ಕಮಲ್ ಹಾಸನ್ ಜನ್ಮ ದಿನ. ಆ ದಿನ ತಮ್ಮದೇ ಒಂದು ಮೊಬೈಲ್ ಆಪ್ ಬಿಡುಗಡೆ ಮಾಡುವುದಾಗಿ ಕಮಲ್ ಹೇಳಿಕೊಂಡಿದ್ದಾರೆ.ರಾಜಕೀಯಕ್ಕೆ ಧುಮುಕುವುದಾಗಿ ಹೇಳಿರುವ ಕಮಲ್ ತಮ್ಮ ಜನ್ಮ ದಿನದ ಸಂದರ್ಭದಲ್ಲಿ ಹೊಸ ಪಕ್ಷ ಸ್ಥಾಪನೆ ಮಾಡುತ್ತಾರೆ ಎಂಬ ಸುದ್ದಿ ಹಬ್ಬಿತ್ತು. ಸದ್ಯಕ್ಕೆ ಹೊಸ ಪಕ್ಷದ