ಬೆಂಗಳೂರು: ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಕಮಲಿ ಧಾರವಾಹಿಯಲ್ಲಿ ತಾರಾ ಪಾತ್ರ ಮಾಡುತ್ತಿದ್ದ ನಟಿ ಸ್ವಪ್ನಾ ದೀಕ್ಷಿತ್ ರನ್ನು ಕೈ ಬಿಡಲಾಗಿದೆ. ಈ ಬಗ್ಗೆ ನಟಿ ಸೋಷಿಯಲ್ ಮೀಡಿಯಾದಲ್ಲಿ ಆರೋಪ ಮಾಡಿದ್ದಾರೆ.ಕಮಲಿ ಧಾರವಾಹಿ 1000 ಕಂತು ಪೂರೈಸಿದೆ. ಇದುವರೆಗೂ ತಾರಾ ಪಾತ್ರವನ್ನು ಸ್ವಪ್ನಾ ನಿರ್ವಹಿಸುತ್ತಿದ್ದರು. ಆದರೆ ಇದೀಗ ತಮಗೂ ತಿಳಿಸದೇ ಪಾತ್ರ ಬದಲಾವಣೆ ಮಾಡಲಾಗಿದೆ ಎಂದಿದ್ದಾರೆ.ತಾರಾ ಪಾತ್ರಕ್ಕೆ ಸ್ವಪ್ನಾ ಬದಲು ಬೇರೊಬ್ಬ ನಟಿ ಬಂದಿರುವ ಬಗ್ಗೆ ಸೋಷಿಯಲ್ ಮೀಡಿಯಾಗಳಲ್ಲಿ ಪೋಸ್ಟ್