ತಲೈವಿ ಚಿತ್ರ ತಮಿಳುನಾಡಿನ ಮುಖ್ಯಮಂತ್ರಿ ಜಯಲಲಿತಾ ಅವರ ಜೀವನಾಧಾರಿತವಾಗಿದ್ದು, ಆ ಚಿತ್ರಕ್ಕಾಗಿ ನಟಿ ಕಂಗನಾ ಸೇಮ್ ಟು ಸೇಮ್ ಜಯಲಲಿತಾ ಥರಾನೇ ರೆಡಿಯಾಗಿ ಕಾಣಿಸಿಕೊಂಡಿದ್ದಾರೆ. ಫೆ.24 ರಂದು ಜೆ. ಜಯಲಲಿತಾ ಅವರ ಹುಟ್ಟುಹಬ್ಬವಾಗಿರೋದ್ರಿಂದ ಚಿತ್ರತಂಡವು ವಿಶೇಷವಾಗಿ ಫೋಟೋ ಬಿಡುಗಡೆ ಮಾಡಿದೆ.ಚಿತ್ರದಲ್ಲಿ ಜಯಲಲಿತಾರಂತೆ ಕಂಗನಾ ಕಾಣಿಸಿಕೊಂಡಿದ್ದು, ಜಯಲಲಿತಾ ಅಭಿಮಾನಿಗಳಲ್ಲಿ ಚಿತ್ರದ ಬಗ್ಗೆ ಕುತೂಹಲ ಹೆಚ್ಚಾಗುತ್ತಿದೆ.