Widgets Magazine

ನಟಿ ಪಾರೂಲ್ ಯಾದವ್‌ಗೆ ನಾಯಿಗಳ ಕಡಿತ ಆಸ್ಪತ್ರೆಗೆ ದಾಖಲು

ಮುಂಬೈ| Rajesh patil| Last Modified ಮಂಗಳವಾರ, 24 ಜನವರಿ 2017 (19:06 IST)
ಏಕಕಾಲದಲ್ಲಿ ಐದು ನಾಯಿಗಳು ಕಚ್ಚಿದ್ದರಿಂದ ಕನ್ನಡ ನಟಿ ಪಾರೂಲ್ ಯಾದವ್‌‌ರನ್ನು ನಗರದ ಕೋಕಿಲಾ ಬೆನ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ನಗರದ ಜೋಗೇಶ್ವರಿ ಪ್ರದೇಶದ ಅಪಾರ್ಟ್‌ಮೆಂಟ್‌‌ನಲ್ಲಿ ವಾಸವಾಗಿರುವ ಪಾರೂಲ್, ಇಂದು ಸಂಜೆ ವಾಕಿಂಗ್‌ಗೆ ತೆರಳಿದ್ದಾಗ ಐದು ಬೀದಿ ನಾಯಿಗಳು ಅಟ್ಟಿಸಿಕೊಂಡು ಕಚ್ಚಿ ಹಾಕಿದ ಘಟನೆ ವರದಿಯಾಗಿದೆ.ಜೋರಾಗಿ ಕೂಗಿಕೊಂಡರು ಕೂಡಾ ಯಾರು ನೆರವಿಗೆ ಧಾವಿಸಲಿಲ್ಲ ಎನ್ನಲಾಗಿದೆ.
ಪಾರೂಲ್ ಯಾದವ್‌ ಕೈ ಕಾಲು ಮತ್ತು ದೇಹದ ಇತರ ಭಾಗಗಳಲ್ಲಿ ನಾಯಿಗಳು ಕಚ್ಚಿದ ಗಂಭೀರ ಗಾಯಗಳಾಗಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಅವರ ಸಹೋದರಿ ಶೀತಲ್ ತಿಳಿಸಿದ್ದಾರೆ.

ಇದೀಗ ಪಾರೂಲ್ ಅಪಾಯದಿಂದ ಪಾರಾಗಿದ್ದು, ಕೆಲ ದಿನಗಳ ಕಾಲ ಆಸ್ಪತ್ರೆಯಲ್ಲಿಯೇ ಚಿಕಿತ್ಸೆ ಪಡೆಯಲಿದ್ದಾರೆ ಎಂದು ಶೀತಲ್ ಮಾಹಿತಿ ನೀಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.
ಇದರಲ್ಲಿ ಇನ್ನಷ್ಟು ಓದಿ :