ಇಡೀ ರಾಜ್ಯ ಅಷ್ಟೇ ಅಲ್ಲ ದೇಶವಿದೇಶಗಳ ಜನಮನ ಗೆದ್ದ ಚಿತ್ರ ತಿಥಿ. ಈ ಚಿತ್ರದ ಮೂಲಕ ಗಡ್ಡಪ್ಪ ಮತ್ತು ಸೆಂಚುರಿ ಗೌಡ ದಿನಬೆಳಗಾಗೋದ್ರಲ್ಲಿ ಸೆಲೆಬ್ರಿಟಿಗಳಾದರು. ಅದರಲ್ಲೂ ಗಡ್ಡಪ್ಪನಿಗೆ ಡೋಂಟ್ ಕೇರ್ ಸ್ಟಾರ್ ಎಂಬ ಟೈಟಲನ್ನೂ ಕೊಟ್ರು ಜನ. ಈಗ ಇದೇ ಟೀಂ ಇನ್ನೊಂದು ಚಿತ್ರದ ಮೂಲಕ ಪ್ರೇಕ್ಷಕರ ಮುಂದೆ ಬರಲು ರೆಡಿಯಾಗಿದೆ. ಈ ವರ್ಷ ಏಪ್ರಿಲ್ನಲ್ಲಿ ತೆರೆಕಂಡು ಕನ್ನಡ ಚಿತ್ರರಂಗದಲ್ಲೆ ವಿಶೇಷ ಸಂಚಲನ ಮೂಡಿಸಿದ ತಿಥಿ ಚಿತ್ರ ಕಲಾವಿದರು