ಬೆಂಗಳೂರು: ಎಲ್ಲಾ ಸರಿ ಇದ್ದಿದ್ದರೆ, ಈತ ಕಲರ್ಸ್ ವಾಹಿನಿಯ ದೊಡ್ಡ ರಿಯಾಲಿಟಿ ಶೋನಲ್ಲಿ ಕಾಣಿಸಿಕೊಳ್ಳಬೇಕಾಗಿತ್ತು. ಅದಕ್ಕಾಗಿ ಎಲ್ಲಾ ತಯಾರಿಯೂ ನಡೆದಿತ್ತು. ಆದರೆ ವಿಧಿಯಾಟವೇ ಬೇರಿತ್ತು. ಇದು ನಿನ್ನೆ ತಡರಾತ್ರಿ ನಡೆದ ಅಪಘಾತದಲ್ಲಿ ದುರ್ಮರಣಕ್ಕೀಡಾದ ನಟ ಜೀವನ್ ಕತೆ. ಹಲವು ಧಾರವಾಹಿ ರಿಯಾಲಿಟಿ ಶೋಗಳಲ್ಲಿ ನಟಿಸಿದ್ದ ಜೀವನ್ ನಿನ್ನೆ ನಟಿ ರಚನಾ ಜತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ.ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಬಿಗ್ ಬಾಸ್ ಕನ್ನಡ ರಿಯಾಲಿಟಿ ಶೋನಲ್ಲಿ ಪಾಲ್ಗೊಳ್ಳಲೆಂದೇ ಅವರು