Widgets Magazine

ಡ್ರಗ್ ಮಾಫಿಯಾ: ವೈಭವ್ ಜೈನ್ ನಿಂದಾಗಿ ಕನ್ನಡ ಕಿರುತೆರೆ ನಟರೂ ಸಂಕಷ್ಟದಲ್ಲಿ!

ಬೆಂಗಳೂರು| Krishnaveni K| Last Modified ಸೋಮವಾರ, 14 ಸೆಪ್ಟಂಬರ್ 2020 (10:01 IST)
ಬೆಂಗಳೂರು: ಸ್ಯಾಂಡಲ್ ವುಡ್ ನಲ್ಲಿ ಡ್ರಗ್ ಮಾಫಿಯಾ ಪ್ರಕರಣಕ್ಕೆ ಸಂಬಂಧಿಸಿದಂತೆ ವೈಭವ್ ಜೈನ್ ಬಂಧನವಾಗುತ್ತಿದ್ದಂತೇ ಕಿರುತೆರೆ ನಟರಿಗೂ ಟೆನ್ ಷನ್ ಶುರುವಾಗಿದೆ.

 
ಕಾರಣ ವೈಭವ್ ಜತೆಗೆ ಪಾರ್ಟಿಯೊಂದರಲ್ಲ ಕನ್ನಡ ಕಿರುತೆರೆ ಲೋಕದ ಬಹುತೇಕ ಸ್ಟಾರ್ ನಟರೂ ಪೋಸ್ ಕೊಟ್ಟಿರುವ ಫೋಟೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.  ಈ ಫೋಟೋದಲ್ಲಿ ಗಟ್ಟಿಮೇಳ ಧಾರವಾಹಿ ನಾಯಕ ರಕ್ಷ್, ನಟಿ ಶ್ವೇತಾ ಆರ್ ಪ್ರಸಾದ್ ಮುಂತಾದವರೂ ಇದ್ದಾರೆ. ಆದರೆ ಈ ಫೋಟೋ ಬಗ್ಗೆ ಮಾಧ‍್ಯಮಗಳಿಗೆ ಸ್ಪಷ್ಟನೆ ನೀಡಿರುವ ರಕ್ಷ್ ಇದು ಪಾರ್ಟಿಯೊಂದರಲ್ಲಿ ತೆಗೆಸಿದ ಫೋಟೋ ಹೌದು. ಆದರೆ ಅವರ ಜತೆ ನನಗೆ ಸಂಪರ್ಕ ಆಗಲೀ, ಪರಿಚಯವಾಗಲೀ ಇಲ್ಲ. ಬೇಕಿದ್ದರೆ ಈಗಲೂ ನನ್ನ ಫೋನ್ ಕಾಂಟೇಕ್ಟ್ ಲಿಸ್ಟ್ ಚೆಕ್ ಮಾಡಬಹುದು. ಅವರ ಜತೆ ಫೋಟೋ ಇದೆ ಎಂದ ಮಾತ್ರಕ್ಕೆ ನಮಗೂ ಅವರಿಗೂ ಸಂಬಂಧವಿದೆ ಎಂದರ್ಥವಲ್ಲ ಎಂದಿದ್ದಾರೆ.
 
ಆದರೆ ಬಂಧಿತ ವೈಭವ್ ಜೈನ್ ಯಾವ ಕಿರುತೆರೆ ನಟರ ಹೆಸರು ಬಾಯ್ಬಿಡುತ್ತಾರೋ ಎಂದು ಈಗ ನಟ-ನಟಿಯರು ಟೆನ್ ಷನ್ ನಲ್ಲಿ ಕಾಲಕಳೆಯುವಂತಾಗಿದೆ.
ಇದರಲ್ಲಿ ಇನ್ನಷ್ಟು ಓದಿ :