ಬೆಂಗಳೂರು: ಹಿಂದೊಮ್ಮೆ ಕನ್ನಡ ಸಿನಿಮಾರಂಗಕ್ಕೆ ಡಬ್ಬಿಂಗ್ ಭೂತ ಬರುತ್ತದೆ ಎಂದಾಗ ಸಿನಿ ರಂಗದ ಕಲಾವಿದರೆಲ್ಲಾ ಒಟ್ಟು ಸೇರಿ ಪ್ರತಿಭಟನೆ ಮಾಡಿದ್ದರು. ಅದಾದ ಮೇಲೆ ಪ್ಯಾನ್ ಇಂಡಿಯಾ ಸಿನಿಮಾ ಹೆಸರಿನಲ್ಲಿ ಹಲವು ಸಿನಿಮಾಗಳು ಕನ್ನಡಕ್ಕೆ, ಕನ್ನಡದಿಂದ ಬೇರೆ ಭಾಷೆಗೆ ಡಬ್ ಆದವು.ಈಗ ಕಿರುತೆರೆಗೂ ಡಬ್ಬಿಂಗ್ ಭೂತ ಆವರಿಸಿದೆ. ಲಾಕ್ ಡೌನ್ ವೇಳೆ ಕನ್ನಡ ಧಾರವಾಹಿಗಳ ಹೊಸ ಎಪಿಸೋಡ್ ಇಲ್ಲ ಎಂಬ ಕಾರಣಕ್ಕೆ ಕನ್ನಡ ವಾಹಿನಿಗಳು ಡಬ್ಬಿಂಗ್ ಧಾರವಾಹಿಗಳು, ಸಿನಿಮಾಗಳನ್ನು ಪ್ರಸಾರ ಮಾಡಿ