ಈ ವಾರ ಕಳೆದರೆ ಕಿರುತೆರೆಯೂ ಬರಿದಾಗಲಿದೆ!

ಬೆಂಗಳೂರು| Krishnaveni K| Last Modified ಮಂಗಳವಾರ, 18 ಮೇ 2021 (12:31 IST)
ಬೆಂಗಳೂರು: ಲಾಕ್ ಡೌನ್ ಆಗುತ್ತದೆಂದು ಮೊದಲೇ ಊಹಿಸಿದ್ದ ಕಿರುತೆರೆ ವಾಹಿನಿಗಳು ಆದಷ್ಟು ಬ್ಯಾಂಕಿಂಗ್ ಎಪಿಸೋಡ್ ಗಳ ಮೂಲಕ ತಮ್ಮ ದೈನಂದಿನ ಕಾರ್ಯಕ್ರಮಗಳನ್ನು ಇದುವರೆಗೆ ನಡೆಸುತ್ತಲೇ ಬಂದಿದ್ದಾರೆ.
 > ಆದರೆ ಹೆಚ್ಚಿನ ವಾಹಿನಿಗಳ ಬ್ಯಾಂಕಿಂಗ್ ಎಪಿಸೋಡ್ ಗಳು ಈ ವಾರ ಮುಗಿದೇ ಹೋಗುತ್ತದೆ. ಮುಂದಿನ ವಾರದಿಂದ ಲಾಕ್ ಡೌನ್ ಮುಕ್ತಾಯವಾಗದೇ ಹೋದರೆ ಕಿರುತೆರೆ ಬರಿದಾಗಲಿದೆ.>   ಮುಂದಿನ ವಾರದಿಂದ ಧಾರವಾಹಿಗಳ ಹೊಸ ಎಪಿಸೋಡ್ ಗಳು ಪ್ರಸಾರವಾಗದು. ಹೀಗಾಗಿ ಮತ್ತೆ ಹಳೆಯ ಎಪಿಸೋಡ್ ಗಳ ಮರುಪ್ರಸಾರವಾಗಲಿದೆ. ಇದು ಟಿಆರ್ ಪಿ ಮೇಲೆ ಭಾರೀ ಪ್ರಮಾಣ ಬೀರಲಿದೆ.ಇದರಲ್ಲಿ ಇನ್ನಷ್ಟು ಓದಿ :