ಚಿತ್ರದ ಶೀರ್ಷಿಕೆ ಕೇಳಿದರೆ ಇದೇನು ಶೀರ್ಷಿಕೆಯೋ ಏನೋ ಅಂದ್ಕೋತೀರಾ. ಇಬ್ಬರು ಬಿಟೆಕ್ ಸ್ಟುಡೆಂಟ್ಸ್ ಜರ್ನಿ ಎಂಬುದು ಚಿತ್ರದ ಹೆಸರು. ಇದೇನಿದು ಟೈಟಲ್ ನಾಲ್ಕು ಮೊಳ ಇದೆ ಎಂದುಕೊಂಡರೂ ಅದಕ್ಕೊಂದು ಅರ್ಥ, ಉದ್ದೇಶ ಇದೆಯಂತೆ. ಇಬ್ಬರು ಬಿ.ಟೆಕ್ ವಿದ್ಯಾರ್ಥಿಗಳಿಗೆ ಮದುವೆ ನಿಶ್ಚಯವಾಗುತ್ತದೆ. ಒಬ್ಬರನ್ನೊಬ್ಬರು ಪರಸ್ಪರ ಚೆನ್ನಾಗಿ ಅರ್ಥ ಮಾಡಿಕೊಳ್ಳಲು ಒಂದೇ ಮನೆಯಲ್ಲಿ ಒಂದು ತಿಂಗಳು ವಾಸ ಮಾಡಬೇಕು. ಆನಂತರ ಮದುವೆ. ಇದೇ ಕಥೆ. ಚಿತ್ರದ ನಾಯಕ ಚೆನ್ನಾಗಿ ಆಸ್ತಿಪಾಸ್ತಿ