ಬೆಂಗಳೂರು: ರಿಷಬ್ ಶೆಟ್ಟಿಗೆ ಸಾಕಷ್ಟು ಖ್ಯಾತಿ ಗಳಿಸಿಕೊಟ್ಟ ಸಿನಿಮಾ ಕಾಂತಾರ. ಇದರ ಮುಂದಿನ ಭಾಗ ಕೂಡಾ ಸೆಟ್ಟೇರುತ್ತಿದೆ. ಆದರೆ ಶೂಟಿಂಗ್ ಯಾವಾಗ ಎಂದು ಇದುವರೆಗೆ ರಿಷಬ್ ಗುಟ್ಟುಬಿಟ್ಟುಕೊಟ್ಟಿರಲಿಲ್ಲ.ಕಾಂತಾರ ಸಿನಿಮಾ ಬಂದು ಒಂದು ವರ್ಷ ಕಳೆದಿದ್ದು ಇಷ್ಟು ದಿನಗಳಲ್ಲಿ ರಿಷಬ್ ಮುಂದಿನ ಭಾಗಕ್ಕೆ ತಯಾರಿ ಮಾಡಿಕೊಂಡಿದ್ದರು. ಸ್ಕ್ರಿಪ್ಟ್ ಜೊತೆಗೆ ಕೆಲವು ಸಾಹಸ ಕ್ರೀಡೆಗಳನ್ನು ಕಲಿಯುವ ಕೆಲಸ ಮಾಡುತ್ತಿದ್ದರು. ಅಲ್ಲದೆ, ಶೂಟಿಂಗ್ ಮಾಡುವ ಲೊಕೇಷನ್ ಗಳನ್ನು ಗುರುತಿಸಿಕೊಂಡಿದ್ದಾರೆ.ಇದೀಗ ಉಡುಪಿಯಲ್ಲಿ ನಡೆದ ವಿಶ್ವ ಬಂಟರ